ಎ.21ರಂದು ಕಡಬ ರೇಂಜ್ ವತಿಯಿಂದ ಸಮಸ್ತ ನಾಯಕರಿಗೆ ಸನ್ಮಾನ
ಕಡಬ, ಎ.18. ಸಮಸ್ತ ಸಂಘಟನೆಗಳ ಒಕ್ಕೂಟ ಕಡಬ ರೇಂಜ್ ವತಿಯಿಂದ ಸಮಸ್ತ ಸಾರಥಿಗಳಿಗೆ ಸನ್ಮಾನ ಮತ್ತು ಎಸ್ಕೆಎಸ್ಸೆಸ್ಸೆಫ್ ನ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನ ಮದೀನಾ ಫ್ಯಾಶನ್ ಇದರ ಪ್ರಚಾರ ಮಹಾ ಸಮ್ಮೇಳನ ಎ.21ರಂದು ಕಡಬ ಜುಮ್ಮಾ ಮಸೀದಿ ವಠಾರದ ಮರ್‌ಹೂಂ ಕೋಟುಮಲ ಬಾಪು ಉಸ್ತಾದ್ ವೇದಿಕೆಯಲ್ಲಿ ನಡೆಯಲಿದೆ ಎಂದು ಕಡಬ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಪಿ.ಎಂ. ಇಬ್ರಾಹಿಂ ದಾರಿಮಿ ಹೇಳಿದರು.
ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ನೂತನ ಅಧ್ಯಕ್ಷ ಶೈಖುನಾ ಅಲ್‌ಹಾಜ್ ಅಸ್ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್, ಉಪಾಧ್ಯಕ್ಷ ಶೈಖುನಾ ಅಲ್‌ಹಾಜ್ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲು, ದಕ್ಷಿಣ ಕರ್ನಾಟಕ ಸಮಸ್ತ ಮಶಾವರ ನೂತನ ಅಧ್ಯಕ್ಷ ಶೈಖುನಾ ಅಲ್‌ಹಾಜ್ ಅಸ್ಸೈಯದ್ ಎನ್.ಪಿ.ಎಂ. ಝೈನುಲ್ ಆಬಿದೀನ್ ತಂಙಳ್ ರನ್ನು ಸನ್ಮಾನಿಸಲಾಗುವುದು.
ಕಾರ್ಯಕ್ರಮದಲ್ಲಿ ಕರ್ನಾಟಕಕ್ಕೆ ಪ್ರಥಮ ಬಾರಿಗೆ ಆಗಮಿಸುತ್ತಿರುವ ಮುಹಮ್ಮದ್ ದಾರಿಮಿ ಕೊಲ್ಲಂ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳ್ತಂಗಡಿ ಡಿ.ಐ.ಸಿ ಅಧ್ಯಕ್ಷ ಅಸ್ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್, ಆತೂರು ಮದ್ರೀಸ್ ಸೈಯದ್ ಜುನೈದ್ ಜಿಫ್ರಿ ತಂಙಳ್, ಎಸ್ಕೆಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಇಸಾಖ್ ಫೈಝಿ, ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ಜಿಲ್ಲಾ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ ಹಾಗೂ ರೇಂಜ್ ಮಟ್ಟದ ಮದ್ರಸದ ಅಧ್ಯಕ್ಷರು, ಮುಖ್ಯ ಗುರುಗಳು ಮೊದಲಾದವರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿ ಹಾಗೂ ಎಸ್.ವೈ.ಎಸ್. ಅಧ್ಯಕ್ಷ ಹಾಜಿ ಕೆ.ಪಿ.ಎಂ. ಶರೀಫ್ ಫೈಝಿ, ರೇಂಜ್ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಹಾಜಿ ಎಸ್. ಅಬ್ದುಲ್ ಖಾದರ್, ಎಸ್ಕೆಎಸ್ಸೆಸ್ಸೆಫ್ ಕಡಬ ವಲಯ ಅಧ್ಯಕ್ಷ ಅಶ್ರಫ್ ಶೇಡಿಗುಂಡಿ, ಕಡಬ ರೇಂಜ್ ಪ್ರಧಾನ ಕಾರ್ಯದರ್ಶಿ ಎಂ.ಕೆ. ಅಶ್ರಫ್ ಮೌಲವಿ ಕೋಲ್ಪೆ ಮೊದಲಾದವರು ಉಪಸ್ಥಿತರಿದ್ದರು.