×
Ad

ರೈತರ ಸಾಲಮನ್ನಾ ಮಾಡಲು ಆಗ್ರಹ: ರೈತಸಂಘದಿಂದ ಹಕ್ಕೊತ್ತಾಯ ಧರಣಿ

Update: 2017-04-18 18:58 IST

ಪುತ್ತೂರು,ಎ.18: ಮೂರು 3 ವರ್ಷಗಳಿಂದ ರಾಜ್ಯದ ರೈತರು ಬರದಿಂದ ತತ್ತರಿಸಿದ್ದು, ಬೆಳೆ ನಷ್ಟವಾಗಿದೆ. ರೈತರು ಸಂಕಷ್ಟಕ್ಕೆ ಒಳಗಾಗಿದ್ದು ರಾಜ್ಯ ಹಾಗೂ ಕೇಂದ್ರ ಸರಕಾರವು ರಾಜ್ಯದ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕೆಂದು ರೈತರ ಹಕ್ಕೊತ್ತಾಯಕ್ಕಾಗಿ ಆಗ್ರಹಿಸಿ ಮಂಗಳವಾರ ಪುತ್ತೂರಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆ ಧರಣಿ ನಡೆಸಿತು.

ಈ ವೇಳೆ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು  ಮಾತನಾಡಿ, ಬರಗಾಲದಿಂದ ರೈತರ ಬೆಳೆ ಶೇ.75 ರಷ್ಟು ನಷ್ಟವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರಕಾರ ಸಾಲಮನ್ನಾ ಮಾಡಬೇಕು ಎಂದು ಹೇಳಿದರು.

ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಕಾರ್ಯದರ್ಶಿ ಬಡಿಲ ಈಶ್ವರ ಭಟ್ ಮಾತನಾಡಿ, ರೈತರ ಸಂಕಷ್ಟಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರ ಸ್ಪಂದಿಸಬೇಕು. ರೈತರ ಎಲ್ಲಾ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಹಸಿರುಸೇನೆಯ ಕಾರ್ಯಕರ್ತರು ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಹಕ್ಕೊತ್ತಾಯ ಮನವಿ ಸಲ್ಲಿಸಿದರು.

ಧರಣಿಯಲ್ಲಿ ರೈತ ಸಂಘ ಹಸಿರುಸೇನೆಯ ರಾಜ್ಯ ಕಾರ್ಯದರ್ಶಿ ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ, ಜಿಲ್ಲಾ ಉಪಾಧ್ಯಕ್ಷ ಧರ್ಣಪ್ಪ ಗೌಡ ಇಡ್ಯಾಡಿ, ಕಾರ್ಯದರ್ಶಿ ಈಶ್ವರ ಪಾಲೆಚ್ಚಾರು,ಪ್ರಮುಖರಾದ ಮನಮೋಹನ ರೈ ಕೋಡಂದೂರು, ಪರಮೇಶ್ವರ ನಾಯ್ಕ್, ಹೊನ್ನಪ್ಪ ಗೌಡ ಪರಣೆ, ಸೀತಾರಾಮ ಗೌಡ ಕಲಾಯಿ, ಚೆನ್ನಪ್ಪ ಗೌಡ, ಮನೋಹರ ರೈ ಕುಂಬ್ರ, ಸುರೇಶ್ ಭಟ್ ಕನ್ಯಾನ, ಪದ್ಮನಾಭ ಭಟ್ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News