ಸೀಮೆಎಣ್ಣೆ ಕುಡಿದು ಮಗು ಮೃತ್ಯು
Update: 2017-04-18 19:40 IST
ಬಂಟ್ವಾಳ, ಎ.18: ಆಕಸ್ಮಿಕವಾಗಿ ಸೀಮೆಎಣ್ಣೆಯನ್ನು ಸೇವಿಸಿ ಮಗುವೊಂದು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಸುಭಾಷ್ ನಗರ ಎಂಬಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಜಲೀಲ್ ಎಂಬವರ ಪುತ್ರಿ ಆಯಿಷಾ ಜಯಿಷಾ (1) ಸೀಮೆಎಣ್ಣೆ ಕುಡಿದು ಮೃತಪಟ್ಟ ಮಗು.
ಮೂರು ದಿನಗಳ ಹಿಂದೆ ಜಲೀಲ್ ಅವರು ಕಾರ್ ನಲ್ಲಿ ಡಾಮರು ಅಂಟಿಕೊಂಡದ್ದನ್ನು ತೆಗೆಯುವ ಸಲುವಾಗಿ ಸೀಮೆಎಣ್ಣೆಯನ್ನು ತರಿಸಿ, ಕೆಲಸವಾದ ಬಳಿಕ ಉಳಿದ ಸೀಮೆಎಣ್ಣೆಯನ್ನು ಮನೆಯೊಳಗಿಟ್ಟಿದ್ದರು. ಬಾಟಲಿಯೊಂದರಲ್ಲಿದ್ದ ಸೀಮೆಎಣ್ಣೆಯನ್ನು ಮಗು ಕುಡಿದಿದೆ. ಕೂಡಲೇ ಮನೆಯವರಿಗೆ ವಿಷಯ ಗೊತ್ತಾಗಿ ಮಗುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ತೀವ್ರ ಅಸ್ವಸ್ಥಗೊಂಡಿದ್ದ ಮಗು ಮೃತಪಟ್ಟಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.