ಉಪ್ಪಿನಂಗಡಿ-ನಟ್ಟಿಬೈಲ್ ಉರೂಸ್ ಸಮಾರಂಭ
ಉಪ್ಪಿನಂಗಡಿ, ಎ.18: ಇಲ್ಲಿನ ನಟ್ಟಿಬೈಲ್‌ನಲ್ಲಿರುವ ಇತಿಹಾಸ ಪ್ರಸಿದ್ಧ ನಟ್ಟಿಬೈಲ್ ದರ್ಗಾ ಶರೀಫ್ ನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಶುಹದಾಕಳ್ ಸ್ಮರಣಾರ್ಥ ಉಪ್ಪಿನಂಗಡಿ ಮಾಲಿಕುದ್ದೀನಾರ್ ಜುಮ್ಮಾ ಮಸೀದಿ ಆಡಳಿತ ಮಂಡಳಿ ಆಶ್ರಯದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ನಟ್ಟಿಬೈಲ್ ದರ್ಗಾ ಉರೂಸ್ ಸಮಾರಂಭವು ನಡೆಯಿತು.
ಗಂಡಿಬಾಗಿಲು ಜುಮಾ ಮಸೀದಿ ಖತೀಬ್ ಹಾದಿ ಅನಸ್ ತಂಙಳ್ ನೇತೃತ್ವದಲ್ಲಿ ಮೌಲೀದ್ ಪಾರಾಯಣ ಮತ್ತು ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು.
ಪುತ್ತೂರು ಕೇಂದ್ರ ಜುಮಾ ಮಸೀದಿ ಖತೀಬ್ ಎಸ್. ಬಿ. ಮುಹಮ್ಮದ್ ದಾರಿಮಿ, ಉಪ್ಪಿನಂಗಡಿ ಮದ್ರಸದ ಸದರ್ ಮುಅಲ್ಲಿಂ ಸಿದ್ದಿಕ್ ದಾರಿಮಿ, ಮುಅಲ್ಲಿಂಗಳಾದ ಮಹಮ್ಮದ್ ಅಲಿ ಮುಸ್ಲಿಯಾರ್, ಅಬ್ದುಲ್ ಅಝೀಝ್ ಮುಸ್ಲಿಯಾರ್, ಹೈದರ್ ಸಅದಿ, ಮಾಲಿಕುದ್ದೀನಾರ್ ಜುಮಾ ಮಸೀದಿ ಆಡಳಿತ ಮಂಡಳಿ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಶುಕೂರ್ ಹಾಜಿ, ಉಪಾಧ್ಯಕ್ಷ ಹಾರೂನ್ ಅಗ್ನಾಡಿ, ಮದ್ರಸ ಮ್ಯಾನೇಜ್‌ಮೆಂಟ್ ಕಾರ್ಯದರ್ಶಿ ಎಚ್. ಯೂಸುಫ್ ಹಾಜಿ, ಕಡವಿನಬಾಗಿಲು ಮದ್ರಸ ಸಮಿತಿ ಅಧ್ಯಕ್ಷ ಬಿ. ಮಹಮ್ಮದ್ ಹಾಜಿ ಮತ್ತಿತರರು ಉಪಸ್ಥಿತರಿದ್ದರು.
ಸಮಿತಿಯ ಅಬ್ದುಲ್ ಹಮೀದ್ ಕರಾವಳಿ ಸ್ವಾಗತಿಸಿ, ಮಹಮ್ಮದ್ ಕೂಟೇಲು ವಂದಿಸಿದರು. ಶಬ್ಬೀರ್ ಕೆಂಪಿ ಕಾರ್ಯಕ್ರಮ ನಿರ್ವಹಿಸಿದರು