ದತ್ತಾಂಶ ರಕ್ಷಣೆ ಮಾರ್ಗಸೂಚಿ ಸಿದ್ಧಗೊಳಿಸುತ್ತಿರುವ ಸರಕಾರ
ಹೊಸದಿಲ್ಲಿ,ಎ.18: ಸಮಗ್ರ ದತ್ತಾಂಶ ರಕ್ಷಣೆ ಮಾರ್ಗಸೂಚಿಯೊಂದನ್ನು ಸಿದ್ಧಗೊಳಿಸುವ ಪ್ರಕ್ರಿಯೆಯಲ್ಲಿ ತಾನು ತೊಡಗಿಕೊಂಡಿದ್ದೇನೆ ಎಂದು ಮಂಗಳವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದ ಕೇಂದ್ರವು, ಇನ್ನೆರಡು ತಿಂಗಳಲ್ಲಿ ಅದು ಅಂತಿಮಗೊಳ್ಳುವುದರಿಂದ ವಾಟ್ಸ್‌ಆ್ಯಪ್‌ನ ಖಾಸಗಿತನ ನೀತಿ ಕುರಿತು ವಿಚಾರಣೆಯನ್ನು ಅಲ್ಲಿಯವರೆಗೆ ಮುಂದೂಡುವಂತೆ ಕೋರಿಕೊಂಡಿತು.
ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ವು ಈ ಮಾರ್ಗಸೂಚಿಯನ್ನು ರೂಪಿಸುತ್ತಿದೆ ಎಂದು ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಅವರು ನ್ಯಾ.ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ತಿಳಿಸಿದರು.
ವಿಚಾರಣೆಯನ್ನು ಎ.27ಕ್ಕೆ ನಿಗದಿಗೊಳಿಸಿದ ನ್ಯಾಯಾಲಯವು ಆ.24ರಂದು ತಾನು ಚರ್ಚಿಸಬೇಕಿರುವ ತಾನು ಚರ್ಚಿಸಬೇಕಿರುವ ವಿಷಯಗಳನ್ನು ಪಟ್ಟಿ ಮಾಡುವಂತೆ ಅರ್ಜಿದಾರರ ಪರ ವಕೀಲ ಹರೀಶ ಸಾಳ್ವೆಯವರಿಗೆ ಸೂಚಿಸಿತು.
ಸರ್ವೋಚ್ಚ ನ್ಯಾಯಾಲಯವು ಎ.5ರಂದು ವಾಟ್ಸ್‌ಆ್ಯಪ್‌ನ ಖಾಸಗಿತನ ನೀತಿ ವಿಷಯವನ್ನು ಸಂವಿಧಾನ ಪೀಠಕ್ಕೆ ಒಪ್ಪಿಸಿತ್ತು.