×
Ad

ಕಳವು ಪ್ರಕರಣ ಇಬ್ಬರು ಆರೋಪಿಗಳ ಬಂಧನ

Update: 2017-04-18 22:55 IST

ಮಂಗಳೂರು, ಎ.18: ಯೆಯ್ಯಾಡಿ ಕೈಗಾರಿಕೆ ಪ್ರದೇಶದಲ್ಲಿ ಸೋಮವಾರ ರಾತ್ರಿ ಉರ್ವ ಠಾಣಾ ಪೊಲೀಸರು ಇಬ್ಬರನ್ನು ಬಂಧಿಸಿ ಕಾರು, ಚಿನ್ನಾಭರಣ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಸುರತ್ಕಲ್‌ನ ಸಂದೀಪ್ ಹಾಗೂ ರಾಕೇಶ್ ಪೂಜಾರಿ ಬಂಧಿತ ಆರೋಪಿಗಳು.

ಉರ್ವ ಸ್ಟೋರ್ ಲೋಕೋಪಯೋಗಿ ಇಲಾಖೆ ವಸತಿಗೃಹದಲ್ಲಿ ಎ.11 ರಂದು ನಡೆದಿದ್ದ ಎರಡು ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಕಳವು ಮಾಡಿದ್ದ 5 ಲಕ್ಷ ರೂ.ಮೌಲ್ಯದ ಐ10 ಕಾರು, 1, ಲಕ್ಷದ 13,200 ರೂ. ಮೌಲ್ಯದ ಚಿನ್ನಾಭರಣ ಮತ್ತು 9,800 ರೂ. ಮೌಲ್ಯದ ಬೆಳ್ಳಿಯ ಆಭರಣಗಳನ್ನು ಪೊಲೀಸರು ವಶಪಡಿಸಿ ತನಿಖೆ ಮುಂದುವರಿಸಿದ್ದದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News