×
Ad

ಪವಾಡವೋ-ಅದೃಷ್ಟವೋ?: ಬತ್ತಿ ಹೋಗಿದ್ದ ಬಾವಿಯಲ್ಲಿ 6 ಅಡಿ ನೀರು

Update: 2017-04-19 13:59 IST

ಮಂಜೇಶ್ವರ, ಎ.19: ಪವಾಡವೋ, ಇಲ್ಲಿನ ನಿವಾಸಿಗಳ ಅದೃಷ್ಟವೋ ? ಬತ್ತಿ ಹೋದ ಬಾವಿಯೊಂದರಲ್ಲಿ 6 ಅಡಿ ನೀರು ರಾತ್ರಿ ಬೆಳಗಾಗುವುದರೊಂದಿಗೆ ಪವಾಡವೆಂಬಂತೆ ತುಂಬಿದೆ. 

ನೀರಿಲ್ಲದೆ ಪರದಾಡುತ್ತಿದ್ದ ಮಂಜೇಶ್ವರ ಸಮೀಪದ ಗೋವಿಂದ ಪೈ ಕಾಲೇಜು ಸಮೀಪ ದ ಕಾಲನಿಯೊಂದರ ನಿವಾಸಿಗಳು ಇದೀಗ ಫುಲ್ ಕುಷ್ ಆಗಿದ್ದಾರೆ. ಸರಕಾರಿ ಬಾವಿಯೊಂದು ನೀರಿಲ್ಲದೆ ಬತ್ತಿ ಹೋಗಿದ್ದು, ಇಲ್ಲಿನ ಆರ್.ಕೆ. ಫ್ರೆಂಡ್ಸ್ ಕ್ಲಬ್ ಹಾಗೂ ಫ್ರೆಂಡ್ಸ್ ಕ್ಲಬ್ ನ ಸದಸ್ಯರು ಬಾವಿಯೊಳಗಿರುವ ಕೆಸರನ್ನು ಮೇಲೆತ್ತಲು ತಯಾರಿ ನಡೆಸಿದ್ದರು. ಇಂದು ಬೆಳಗ್ಗೆ ಇಲ್ಲಿನ ನಿವಾಸಿಯೋರ್ವರು ಬಾವಿಯೊಳಗೆ ನೋಡಿದಾಗ ಬತ್ತಿ ಹೋಗಿದ್ದ ಬಾವಿಯಲ್ಲಿ 6 ಅಡಿಯಷ್ಟು ನೀರು ತುಂಬಿಕೊಂಡಿದೆ. ವಿಷಯ ತಿಳಿದು ನೂರಾರು ಮಂದಿ ಬಾವಿಯನ್ನು ನೋಡಲು ಆಗಮಿಸುತ್ತಿದ್ದಾರೆ. ಬಾವಿಯಲ್ಲಿ ಪವಾಡವೆಂಬಂತೆ ಒಂದೇ ದಿನದಲ್ಲಿ 6 ಅಡಿ ನೀರು ತುಂಬಿರುವುದು ಇಲ್ಲಿನ ನಿವಾಸಿಗಳಲ್ಲಿ ಸಂತಸ ಮೂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News