ಎಪ್ರಿಲ್ 22, 23: ದಾರುನ್ನಜಾತ್ 7ನೇ ವಾರ್ಷಿಕ, ಅಜ್ಮೀರ್ ಮೌಲೀದ್
ಮಂಜೇಶ್ವರ, ಎ.19: ಚಿಗುರುಪಾದೆ ಚಿನಾಲ ದಾರುನ್ನಜಾತ್ 7ನೇ ವಾರ್ಷಿಕ ಹಾಗೂ ಅಜ್ಮೀರ್ ಮೌಲೀದ್ ಎ.22 ಹಾಗೂ 23 ರಂದು ನಡೆಯಲಿದೆ ಎಂದು ಪದಾಧಿಕಾರಿಗಳು ಮಂಜೇಶ್ವರ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
22ರಂದು 3 ಗಂಟೆಗೆ ಮೊಯ್ದು ಸಅದಿ ಚೇರೂರು ಕಾರ್ಯಕ್ರಮ ಉದ್ಘಾಟಿಸುವರು. ಕೆ.ಎಸ್.ಎಂ ತಂಙಳ್ ಗಾಂಧೀ ನಗರ ಅಧ್ಯಕ್ಷತೆ ವಹಿಸುವರು. ಮುನೀರ್ ಸಅದಿ ನೆಲ್ಲಿಕ್ಕುನ್ನು ಪ್ರಾಸ್ತಾವಿಕ ಭಾಷಣ ಮಾಡುವರು. ರಾತ್ರಿ 8 ಗಂಟೆಗೆ ಸ್ವಲಾತ್ ಮಜ್ಲಿಸ್ ನಡೆಯಲಿದ್ದು, ಹಬೀಬುರ್ರಹ್ಮಾನ್ ತಂಙಳ್ ನೇತೃತ್ವ ನೀಡುವರು. ಹುಸೈನ್ ಸಅದಿ ಕೆ.ಸಿ ರೋಡು ಮುಖ್ಯ ಭಾಷಣ ಮಾಡುವರು. ಹಂಝ ತಂಙಳ್ ದುಆಗೆ ನೇತೃತ್ವ ನೀಡುವರು.
23 ರಂದು ಬೆಳಗ್ಗೆ ಮೌಲೀದ್ ಪಾರಾಯಣ ನಡೆಯಲಿದೆ. 10 ಗಂಟೆಗೆ ವ್ಯೆದ್ಯಕೀಯ ಶಿಬಿರ ನಡೆಯಲಿದೆ. ಸಂಜೆ 4 ಗಂಟೆಗೆ ಕಟ್ಟಡದ ಉದ್ಘಾಟನೆ ನಡೆಯಲಿದ್ದು, ಸೈಯದ್ ಆಟ್ಟಕ್ಕೋಯ ತಂಙಳ್ ಕುಂಬೋಳ್ ಕಾರ್ಯಕ್ರಮ ಉದ್ಘಾಟಿಸುವರು.
ಸಂಜೆ 4:30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ ಕಾರ್ಯಕ್ರಮ ಉದ್ಘಾಟಿಸುವರು. ಉಸ್ಮಾನ್ ಜೌಹರಿ ಮುಖ್ಯ ಭಾಷಣ ಮಾಡುವರು. ಆಟಕ್ಕೋಯ ತಂಙಳ್ ಮಾನಿಮೂಲೆ ಅಧ್ಯಕ್ಷತೆ ವಹಿಸುವರು. ಮಂಜೇಶ್ವರ ಶಾಸಕ ಪಿ.ಬಿ ಅಬ್ದುಲ್ ರಝಾಕ್ , ಹೈದರ್ ಪರ್ತಿಪ್ಪಾಡಿ , ಹರ್ಷಾದ್ ವರ್ಕಾಡಿ ಮತ್ತಿತರರು ಉಪಸ್ಥಿತರಿರುವರು ಎಂದರು.
ಸುದ್ದಿಗೋಷ್ಟಿಯಲ್ಲಿ ಮೊಯ್ದು ಸಅದಿ, ಆಟ್ಟಕ್ಕೋಯ ತಂಘಳ್ , ಹಬೀಬುರ್ರಹ್ಮಾನ್ , ಅಬ್ದುಲ್ ಖಾದರ್ ಸಖಾಫಿ , ಶಬೀರ್ ಅಶ್‌ಹರಿ , ಮುಹಮ್ಮದ್ ಇಬ್ರಾಹಿಂ ಪಾವೂರು, ಅಬ್ದುಲ್ ರಹಿಮಾನ್ ಮುಬಾರಕ್ , ಸಂಶುದ್ದೀನ್ ಅಳಿಕೆ ಉಪಸ್ಥಿತರಿದ್ದರು.