×
Ad

​ಎ.28ರಂದು ಧರ್ಮಪ್ರಾಂತದ ಕೆಥೊಲಿಕ್ ಮಹಿಳಾ ಸಮಾವೇಶ

Update: 2017-04-19 17:05 IST

ಉಡುಪಿ, ಎ.19: ಉಡುಪಿ ಧರ್ಮಪ್ರಾಂತದ ಕೆಥೊಲಿಕ್ ಮಹಿಳಾ ಸಂಘಟನೆಯ ಐದನೇ ವಾರ್ಷಿಕೋತ್ಸವ ಹಾಗೂ ಧರ್ಮಪ್ರಾಂತ ಮಟ್ಟದ ಮಹಿಳಾ ಸಮಾವೇಶವು ಎ.28ರಂದು ಬೆಳಗ್ಗೆ 10 ಗಂಟೆಗೆ ಕನ್ನರ್ಪಾಡಿ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಜರಗಲಿದೆ.

ಸಮಾವೇಶವನ್ನು ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಲಿದ್ದು, ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಅಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿ ಧರ್ಮಪ್ರಾಂತದ ಶ್ರೇಷ್ಠ ಗುರು ವಂ.ಬ್ಯಾಪ್ಟಿಸ್ಟ್ ಮಿನೇಜಸ್ ಆಶೀರ್ವಚನ ನೀಡಲಿದ್ದಾರೆ ಎಂದು ಸಂಘಟನೆಯ ಅಧ್ಯಕ್ಷೆ ಐರಿನ್ ಪಿರೇರಾ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
 
ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಉಡುಪಿ ವಲಯದ ಪ್ರಧಾನ ಧರ್ಮಗುರು ವಂ.ಫ್ರೆಡ್ ಮಸ್ಕರೇನಸ್, ಕಟೀಲು ಚರ್ಚಿನ ಧರ್ಮಗುರು ವಂ.ರೋನಾಲ್ಡ್ ಕುಟಿನ್ಹಾ, ಕರ್ನಾಟಕ ಪ್ರಾಂತೀಯ ಮಹಿಳಾ ಆಯೋಗದ ಕಾರ್ಯದರ್ಶಿ ಲೌಲಿ ಎಲ್ದೋಸ್ ಭಾಗವಹಿಸಲಿದ್ದಾರೆ. ಬಳಿಕ ಮಹಿಳೆಯರಿಗಾಗಿ ವಿಚಾಗೋಷ್ಠಿ ನಡೆಯಲಿದ್ದು, ಸಮಾಜ ಸೇವಕಿ ವೆರೋನಿಕಾ ಕರ್ನೆಲಿಯೋ ನೇತೃತ್ವ ವಹಿಸಲಿದ್ದಾರೆ. ವಿಚಾರಗೋಷ್ಟಿಯಲ್ಲಿ ಅಕಾಶವಾಣಿ ಮಂಗಳೂರು ಇದರ ಕಾರ್ಯನಿರ್ವಾಹಕಿ ಕನ್ಸೆಪ್ಟಾ ಆಳ್ವ, ನ್ಯಾಯವಾದಿ ಮೇರಿ ಶ್ರೇಷ್ಟ ವಿಚಾರ ಮಂಡಿಸಲಿರುವರು.

ಮಧ್ಯಾಹ್ನದ ಬಳಿಕ ಪ್ರತಿ ವಲಯದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕಿ ಸಿಸ್ಟರ್ ಟ್ರೀಜಾ ಮಾರ್ಟಿಸ್, ಕಾರ್ಯದರ್ಶಿ ಸಿಂತಿಯಾ ಡಿಸೋಜ, ಕೋಶಾಧಿಕಾರಿ ಬೀನಾ ಲೂವಿಸ್, ಮೊತಿಯಾಂ ಸಂಪಾದಕಿ ಜಾನೆಟ್ ಬಾರ್ಬೊಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News