ನೆಹರು ಯುವ ಕೇಂದ್ರದ ಉಡುಪಿ ಜಿಲ್ಲಾ ಯುವ ಸಮನ್ವಯಾಧಿಕಾರಿಯಾಗಿ ವಿಲ್ಪ್ರೆಡ್ ಡಿಸೋಜ
ಉಡುಪಿ, ಎ.19: ಉಡುಪಿಯ ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಸಮನ್ವಯಾಧಿಕಾರಿಯಾಗಿ ವಿಲ್ಪ್ರೆಡ್ ಡಿಸೋಜ ನೇಮಕ ಗೊಂಡಿದ್ದಾರೆ. ಇವರು ಕೇಂದ್ರ ಸರಕಾರದ ಕ್ರೀಡಾ ಯುವಜನ ಸೇವೆಗಳ ಮಂತ್ರಾಲಯದ ಸ್ವಾಯತ್ತ ಸಂಸ್ಥೆ ನೆಹರು ಯುವ ಕೇಂದ್ರದ ಮಹಾನಿರ್ದೇಶಕ ರಿಂದ ನಿಯುಕ್ತಿಗೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನವರಾದ ಡಿಸೋಜ, ಅರ್ಥಶಾಸ್ತ್ರ ಪದವೀಧರರಾಗಿದ್ದು, ಸಾರ್ವಜನಿಕ ಸಂಪರ್ಕ, ಜಾಹಿರಾತು ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದಾರೆ. ವಿಲ್ಫ್ರೆಡ್ ಡಿಸೋಜ ಇದಕ್ಕೆ ಮುನ್ನ ಹರಿಯಾಣದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಫರೀದಾ ಬಾದ್, ಹೊಸದಿಲ್ಲಿ ಹಾಗೂ ಚಂಢೀಘಡದಲ್ಲಿ ಕಾರ್ಯನಿರ್ವಹಿಸಿದ್ದರು.
ವಿಲ್ಪ್ರೆಡ್ ಡಿಸೋಜ ಜೆಸಿಂತಾ ಡಿಸೋಜಾರಿಂದ ಇತ್ತೀಚೆಗೆ ಅಧಿಕಾರ ವಹಿಸಿಕೊಂಡರು. ಉಡುಪಿ ಜಿಲ್ಲೆಯ ಎಲ್ಲಾ ತಾಲೂಕಿನ ಯುವಕ ಯುವತಿ ಮಹಿಳಾ ಮಂಡಲದ ಸದಸ್ಯರು ನೆಹರು ಯುವ ಕೇಂದ್ರದ ಕಾರ್ಯಕ್ರಮವನ್ನು ಅಥವಾ ಇನ್ನಾವುದೇ ಸಾಮಾಜಿಕ ಗ್ರಾಮೀಣ ಕಾರ್ಯಕ್ರಮವನ್ನು ನಡೆಸಲು ವಿಲ್ಫ್ರೆಡ್ ಡಿಸೋಜರನ್ನು ಮುಖತಃ ಭೇಟಿ ಮಾಡುವಂತೆ ಅಥವಾ ದೂರವಾಣಿ ಸಂಖ್ಯೆ:0820-2574992ನ್ನು ಸಂಪರ್ಕಿಸುವಂತೆ ನೆಹರು ಯುವ ಕೇಂದ್ರದ ಪ್ರಕಟನೆ ತಿಳಿಸಿದೆ