ಬಾಬರಿ ಮಸೀದಿ ಧ್ವಂಸ ಒಳಸಂಚು ಪ್ರಕರಣ: ಪ್ರತಿಕ್ರಿಯಿಸದ ಬಿಜೆಪಿ

Update: 2017-04-19 14:59 GMT

ಹೊಸದಿಲ್ಲಿ, ಎ.19: ಪಕ್ಷದ ಹಿರಿಯ ನಾಯಕರಾದ ಅಡ್ವಾಣಿ, ಜೋಷಿ ಮತ್ತು ಉಮಾಭಾರತಿ ವಿರುದ್ಧ ವಿಚಾರಣೆ ಪುನರೂರ್ಜಿತಗೊಳಿಸುವ ಸುಪ್ರೀಂಕೋರ್ಟ್ ಆದೇಶವನ್ನು ಪರಿಶೀಲಿಸಿದ ಬಳಿಕ ಪ್ರತಿಕ್ರಿಯೆ ನೀಡುವುದಾಗಿ ಭಾರತೀಯ ಜನತಾ ಪಕ್ಷ ತಿಳಿಸಿದೆ.

ಈ ನಾಯಕರ ಬಗ್ಗೆ ಪಕ್ಷವು ಗೌರವದ ಭಾವನೆ ಹೊಂದಿದೆ ಎಂದು ಹಿರಿಯ ಮುಖಂಡ ಹಾಗೂ ಕಾನೂನು ಸಚಿವ ರವಿಶಂಕರ ಪ್ರಸಾದ್ ತಿಳಿಸಿದ್ದಾರೆ.

ದೋಷಿಗಳಿಗೆ ಶಿಕ್ಷೆಯಾಗಲಿ- ಕಾಂಗ್ರೆಸ್: ಯಾವುದೇ ಭಯ ಅಥವಾ ಪ್ರಭಾವಕ್ಕೆ ಒಳಗಾಗದೆ ಕಾನೂನು ತನ್ನದೇ ಹಾದಿಯಲ್ಲಿ ಸಾಗಲಿ. ದೋಷಿಗಳಿಗೆ ಶಿಕ್ಷೆಯಾಗಲಿ ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿದೆ.

ಧರ್ಮ, ಜಾತಿ, ಅಂತಸ್ತು, ಸ್ಥಾನಮಾನದ ಗಣನೆಯಿಲ್ಲದೆ ದೇಶದ ಕಾನೂನು ಎಲ್ಲರಿಗೂ ಸಮಾನವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ವಕ್ತಾ ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ.

  ನ್ಯಾಯವು ಎಲ್ಲರಿಗೂ ಒಂದೇ ಆಗಿದೆ. ಆದ್ದರಿಂದ ರಾಜಸ್ತಾನದ ರಾಜ್ಯಪಾಲ ಕಲ್ಯಾಣ್ ಸಿಂಗ್‌ರನ್ನು ವಜಾಗೊಳಿಸಿ, ವಿಚಾರಣೆ ಎದುರಿಸುವಂತೆ ಮಾಡಬೇಕು. ಗಾಂಧೀಜಿ ಹತ್ಯೆ ಮಾಡಿದವರನ್ನು ಗಲ್ಲಿಗೇರಿಸಲಾಗಿದೆ. ಆದರೆ ಬಾಬರಿ ಮಸೀದಿ ದ್ವಂಸಗೊಳಿಸಿದವರನ್ನು ಕೇಂದ್ರ ಸಚಿವರನ್ನಾಗಿ ಮಾಡಲಾಗಿದೆ ಹಾಗೂ ಪದ್ಮವಿಭೂಷಣ್ ಪ್ರಶಸ್ತಿ ನೀಡಲಾಗಿದೆ ಎಂದು ಅಸಾದ್ದೀನ್ ಉವೈಸಿ ಹೇಳಿದ್ದಾರೆ.

 ಈ ಪ್ರಕರಣ 1992ರಿಂದಲೂ ಅಸ್ತಿತ್ವದಲ್ಲಿದೆ. ಆರೋಪಟ್ಟಿಯೇ ಮಾನದಂಡ ಎಂದಾದರೆ ಅದೆಷ್ಟು ಕಾಂಗ್ರೆಸ್ ಸಚಿವರ ವಿರುದ್ಧ ಆರೋಪಪಟ್ಟಿ ದಾಖಲಾಗಿಲ್ಲ? - ಸಚಿವ ಅರುಣ್ ಜೇಟ್ಲೀ .

ಸುಪ್ರೀಂಕೋರ್ಟ್ ಆದೇಶ ಸ್ವಾಗತಾರ್ಹ.ಈ ಹಿನ್ನೆಲೆಯಲ್ಲಿ ಉಮಾಭಾರತಿಯನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು- ಎನ್‌ಸಿಪಿ ರಾಷ್ಟ್ರೀಯ ವಕ್ತಾರ ನವಾಬ್ ಮಲಿಕ್.

ಬಿಜೆಪಿ ಯಾವುದೇ ಮೌಲ್ಯ(ಕಾನೂನು)ಕ್ಕಿಂತ ಅತೀತವಲ್ಲ. ನ್ಯಾಯದ ನಿಟ್ಟಿನಲ್ಲಿ ಇದೊಂದು ಪ್ರಮುಖ ಮುನ್ನಡೆ - ಕಪಿಲ್ ಸಿಬಲ್(ಕಾಂಗ್ರೆಸ್ ಮುಖಂಡ).

ಚಾರಿತ್ರಿಕ ಆದೇಶ. ದೇಶ ವಿಭಜನೆಗೊಳ್ಳುವುದನ್ನೆ ತಡೆಗಟ್ಟಬಲ್ಲ ಪ್ರಮುಖ ನಿರ್ಧಾರವಿದು- ಎಸ್ಪಿ ಮುಖಂಡ ಅಝಂ ಖಾನ್.

 ನ್ಯಾಯಾಂಗದ ಕಾರ್ಯದ ಬಗ್ಗೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲ- ಸ್ಮತಿ ಇರಾನಿ, ಕೇಂದ್ರ ಸಚಿವೆ.

ಸುಪ್ರೀಂಕೋರ್ಟ್ ತೀರ್ಪು ಸಮಾಧಾನ ತಂದಿದೆ. ಉತ್ತರ ಪ್ರದೇಶದ ಸರಕಾರ ವಿಚಾರಣೆಗೆ ಅಡ್ಡಿ ತರಲಾರದು ಎಂದು ಭಾವಿಸುತ್ತೇವೆ. ಪ್ರಕರಣದಲ್ಲಿ ದೋಷಿಗಳೆಂದು ಕಂಡುಬರುವ ಎಲ್ಲಾ ಬಿಜೆಪಿ ಮುಖಂಡರನ್ನೂ ಶಿಕ್ಷಿಸಬೇಕು - ಬಾಬರಿ ಮಸೀದಿ ಕ್ರಿಯಾ ಸಮಿತಿ ಸಂಯೋಜಕ ಝಫರ್ಯಾಬ್ ಜಿಲಾನಿ.

 ಇದೊಂದು ರಾಷ್ಟ್ರೀಯ ಬೆಳವಣಿಗೆಯಾಗಿತ್ತು. ಆದರೆ ಇದನ್ನು ಇನ್ನೂ ಒಳಸಂಚು ಎಂದು ಪರಿಗಣಿಸುವುದರ ಬಗ್ಗೆ ನನಗೆ ಅಸಮಾಧಾನವಿದೆ. ಪ್ರಕರಣದ ಬಗ್ಗೆ ಇರುವ ಎಲ್ಲಾ ಆರೋಪಪಟ್ಟಿಗಳನ್ನೂ ಸರಕಾರ ಹಿಂಪಡೆಯಬೇಕು- ಸಂಜಯ್ ರಾವತ್, ಶಿವಸೇನಾ ಮುಖಂಡ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News