×
Ad

ಯಾರ ವಿರುದ್ಧವೂ ಕ್ರಮವಿಲ್ಲ : ಯುನೈಟೆಡ್ ಏರ್‌ಲೈನ್ಸ್ ಸಿಇಒ

Update: 2017-04-19 20:43 IST

ವಾಶಿಂಗ್ಟನ್, ಎ. 19: ವಿಮಾನದಿಂದ ಪ್ರಯಾಣಿಕರೊಬ್ಬರನ್ನು ನೆಲದಲ್ಲಿ ಎಳೆದುಕೊಂಡು ಹೋದ ಪ್ರಕರಣಕ್ಕೆ ಸಂಬಂಧಿಸಿ ತಾನು ಸೇರಿದಂತೆ ಯಾರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದಿಲ್ಲ ಎಂದು ಯುನೈಟೆಡ್ ಏರ್‌ಲೈನ್ಸ್ ಸಿಇಒ ಆಸ್ಕರ್ ಮನೋಝ್ ಮಂಗಳವಾರ ಹೇಳಿದ್ದಾರೆ.

ಈ ಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ತಾನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದ ಅವರು, ನಿಗದಿಗಿಂತ ಹೆಚ್ಚು ಟಿಕೆಟ್‌ಗಳನ್ನು ವಿತರಿಸುವ ಕುರಿತ ನೀತಿಗಳನ್ನು ಈ ತಿಂಗಳ ಕೊನೆಯಲ್ಲಿ ಮರುಪರಿಶೀಲಿಸಿದ ಬಳಿಕ ಹೆಚ್ಚಿನ ವಿವರಗಳನ್ನು ನೀಡುವ ಭರವಸೆಯನ್ನು ಅವರು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News