ಎ.21-23: ಬಿಐಟಿಯಲ್ಲಿ ರಾಷ್ಟ್ರಮಟ್ಟದ ಇಂಜಿನಿಯರ್‌ಗಳ ಕಾರ್ಯಾಗಾರ

Update: 2017-04-19 15:37 GMT

ಮಂಗಳೂರು, ಎ.19: ಬ್ಯಾರೀಸ್ ಇನ್ಸ್‌ಟ್ಯೂಟ್ ಆಫ್ ಇನೋಳಿ (ಬಿಐಟಿ) ನೇತೃತ್ವದಲ್ಲಿ ಎ.21ರಿಂದ 23ರವರಗೆ ‘ಹೈ ಸ್ಪೀಡ್ ಪ್ಲೋವ್ಸ್ -ಡಾಕ್ , ಹಸ್‌ಡಾಕ್’ ಎಂಬ ಯಾಂತ್ರಿಕತೆಯಲ್ಲಿ ವೇಗದ ತಂತ್ರಜ್ಞಾನಕ್ಕೆ ಸಂಬಂಧಿಸಿದ ಇಂಜಿನಿಯರ್‌ಗಳ ರಾಷ್ಟ್ರಮಟ್ಟದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಾಗಾರದಲ್ಲಿ ಇಸ್ರೋ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ವಿಶ್ರಾಂತ ವಿಜ್ಞಾನಿ ಡಾ.ಆರ್.ಸಿ.ಮೆಹ್ತಾ, ಐಐಯುಎಂ ಮಲೇಶಿಯಾದ ಪ್ರೊಫೆಸರ್ ಡಾ.ಎಸ್.ಎ.ಖಾನ್ ಭಾಗವಹಿಸಲಿದ್ದಾರೆ.

ಮಂಗಳೂರು ವಿ.ವಿ.ಕುಲಪತಿ ಡಾ.ಕೆ.ಭೈರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಿಐಟಿಯ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಅಧ್ಯಕ್ಷತೆ ವಹಿಸಿಲಿದ್ದಾರೆ. ಬಿಐಟಿಯ ಪ್ರಾಂಶುಪಾಲ ಡಾ.ಅಬ್ದುಲ್ ಕರೀಂ ಭಾಗವಹಿಸಲಿದ್ದಾರೆ. ಬೆಂಗಳೂರಿನ ಐಸಾಕ್ ಹೊರತಾಗಿ ಎರಡನೆ ವೇಗದ ತಾಂತ್ರಿಕತೆಯ ಸಂಶೋಧನಾ ಕೇಂದ್ರವನ್ನು ಹೊಂದಿರುವ ಸಂಸ್ಥೆ ಬಿಐಟಿಯಾಗಿದ್ದು, ದೇಶಾದ್ಯಂತ ಸುಮಾರು 100 ಪ್ರತಿನಿಧಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News