×
Ad

​ಮಹಾನ್ ಪುರುಷರ ಜೀವನ ನಮಗೆ ಮಾರ್ಗದರ್ಶನವಾಗಲಿ: ಅಸ್ಸೈಯದ್ ಶಿಹಾಬುದ್ದೀನ್ ತಂಙಳ್ ಅಲ್ ಹೈದ್ರೋಸಿ

Update: 2017-04-19 22:31 IST

ಮಂಗಳೂರು, ಎ. 19: ಮಹಾನ್ ಪುರುಷರ ಜೀವನ ಮತ್ತು ತ್ಯಾಗಗಳು ನಮಗೆ ಮಾರ್ಗದರ್ಶನವಾಗಬೇಕು ಎಂದು ಅಸ್ಸೈಯದ್ ಶಿಹಾಬುದ್ದೀನ್ ತಂಙಳ್ ಅಲ್ ಹೈದ್ರೋಸಿ ಕಿಲ್ಲೂರು ಹೇಳಿದ್ದಾರೆ.

ಬೈಕಂಪಾಡಿ ಸಮೀಪದ ಅಡ್ಕ ಹಝ್ರತ್ ಶೇಖ್ ಮಹ್ಮೂದ್ ವಲಿಯುಲ್ಲಾಹ್ ಉರೂಸ್ ಮತ್ತು ನವೀಕೃತ ಗೌಸಿಯಾ ಮಸೀದಿ ಹಾಗೂ ದರ್ಗಾ ಕಟ್ಟಡ ಉದ್ಘಾಟನಾ ಕಾರ್ಯಕ್ರಮದ ಐದನೆ ದಿನವಾದ ಬುಧವಾರ ಧಾರ್ಮಿಕ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು.

ಉರೂಸ್‌ನಂತಹ ಧಾರ್ಮಿಕ ಕಾರ್ಯಕ್ರಮ ಐತಿಹಾಸಿಕವಾಗಿದೆ. ಮಹಾನ್ ವ್ಯಕ್ತಿಗಳು ದೇವನಿಗೆ ಸಂಪ್ರೀತಿಯಾಗುವ ರೀತಿಯಲ್ಲಿ ಜೀವನ ನಡೆಸಿ ಮಾನವ ಸಮುದಾಯದ ಒಳಿತಿಗಾಗಿ ತ್ಯಾಗ ಮತ್ತು ಕಷ್ಟಗಳನ್ನು ಸಹಿಸಿ ಸ್ಮರಣೀಯರಾಗಿದ್ದಾರೆ. ಅವರ ಸಂದೇಶಗಳು ಪಾಲನೆ ಮಾಡುವಂತಾಗಲಿ ಎಂದರು.

ಕೇರಳ ಕಣ್ಣೂರಿನ ಅಬ್ದುಸ್ಸಮದ್ ಅಮಾನಿ ಪಟ್ಟುವಂ ಮತ್ತು ಸಂಗಡಿಗರು ಬುರ್ದಾ ಮಜ್ಲಿಸ್‌ನ ನೇತೃತ್ವ ವಹಿಸಿದ್ದರು. ಮುಹಮ್ಮದ್ ನಬೀಲ್ ಬರಕಾತಿ ಬೆಂಗಳೂರು ಅವರು ನಅತ್ ವಾಚನ ಮಾಡಿದರು. ಬೈಕಂಪಾಡಿ ಜುಮಾ ಮಸೀದಿ ಸಮಿತಿಯ ಅಧ್ಯಕ್ಷ ಅಬ್ದುನ್ನಾಸಿರ್ ಲಕ್ಕಿಸ್ಟಾರ್ ಅಧ್ಯಕ್ಷತೆ ವಹಿಸಿದ್ದರು.

ಅತಿಥಿಗಳಾಗಿ ಮಸೀದಿ ಸಮಿತಿಯ ಉಪಾಧ್ಯಕ್ಷ ಚೈಬಾವ, ಮಸೀದಿಯ ಖತೀಬ್ ಹೈದರಾಲಿ ಸಖಾಫಿ, ಅಂಗರಗುಂಡಿ ಬದ್ರಿಯಾ ಮಸೀದಿಯ ಸದರ್ ಯಹ್ಯಾ ಸಖಾಫಿ ಉಪಸ್ಥಿತರಿದ್ದರು. ಬೈಕಂಪಾಡಿ ಜುಮಾ ಮಸೀದಿ ಸಮಿತಿಯ ಕಾರ್ಯದರ್ಶಿ ಸೈದುದ್ದೀನ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News