×
Ad

ಆಳ್ವಾಸ್‌ನಲ್ಲಿ ಮಹಾವೀರ ಜಯಂತಿ

Update: 2017-04-19 23:49 IST

ಮೂಡುಬಿದಿರೆ, ಎ.18: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ಶ್ರೀಮಹಾವೀರ ಜಯಂತಿ ದಿನಾಚರಣೆಯು ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಭವನದಲ್ಲಿ ನಡೆಯಿತು.

ಮೂಡುಬಿದಿರೆ ಶ್ರೀ ಜೈನಮಠದ ಸ್ವಸ್ತಿಶ್ರೀ ಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ನಮ್ಮ ಶಕ್ತಿಯನ್ನು ನಾವು ಒಳ್ಳೆಯ ಉದ್ದೇಶಕ್ಕೆ ಬಳಸಬೇಕೆಂದು ಮಹಾವೀರರ ಆಶಯವಾಗಿತ್ತು. ನಮ್ಮಲ್ಲಿರುವ ಮದ-ಮೋಹ-ಮತ್ಸರ ಎಲ್ಲವನ್ನು ತೊರೆದು ಶುದ್ಧಾತ್ಮನಾಗಬೇಕು ಎಂಬುವುದಕ್ಕೆ ಸಪ್ತ ತತ್ವಗಳನ್ನು ಬೋಧಿಸಿದ್ದಾರೆ. ನಾವು ಎಲ್ಲ ಜೀವಿಗಳಲ್ಲೂ ದಯೆ ಅನುಕಂಪಗಳನ್ನು ಬೆಳೆಸಿಕೊಳ್ಳಬೇಕು. ಶುದ್ಧ ಮನಸ್ಸನ್ನು ಹೊಂದಿರಬೇಕೆಂಬ ಮಹಾವೀರರ ಸಂದೇಶವನ್ನು ನಾವು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.

ವಾಗ್ಮಿ ಸುಕುಮಾರ್ ಬಲ್ಲಾಳ್ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚೌಟರ ಅರಮನೆಗೆ ಕುಲದೀಪ್ ಎಂ. ಮುಖ್ಯ ಅತಿಥಿಯಾಗಿದ್ದರು.

ರಾಜಶ್ರೀ ಮತ್ತು ಪದ್ಮಶ್ರೀ ಅವರಿಂದ ಅಷ್ಟವಿಧಾರ್ಚನೆ, ಆಳ್ವಾಸ್ ವಿದ್ಯಾರ್ಥಿಗಳು ಜಿನ ಆರಾಧನಾ ಗೀತೆಗಳನ್ನು ಹಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News