ಮಂಗಳೂರು: ಅಗ್ನಿಶಾಮಕ ದಳದಿಂದ ರ್ಯಾಲಿ
Update: 2017-04-20 13:44 IST
ಮಂಗಳೂರು, ಎ.20: ರಾಜ್ಯ ಅಗ್ನಿಶಾಮಕ ಸೇವಾ ಇಲಾಖೆಯು ಹಮ್ಮಿಕೊಂಡ ಅಗ್ನಿಶಾಮಕ ಸೇವಾ ಸಪ್ತಾಹದ ಅಂಗವಾಗಿ ಅಗ್ನಿಶಾಮಕ ಸಿಬ್ಬಂದಿ ವರ್ಗವು ಗುರುವಾರ ನಗರದಲ್ಲಿ ರ್ಯಾಲಿ ನಡೆಸಿತು.
ನಗರದ ಅಂಬೇಡ್ಕರ್ ವೃತ್ತದಿಂದ ಟೆಲಿಕಾಂ ಹೌಸ್ ರಸ್ತೆಯಲ್ಲಿರುವ ಪಾಂಡೇಶ್ವರ ಅಗ್ನಿಶಾಮಕ ಠಾಣಾ ಆವರಣದವರೆಗೆ ರ್ಯಾಲಿ ನಡೆಯಿತು. ಅಗ್ನಿಶಾಮಕ ದಳದ ಮುಖ್ಯ ಅಧಿಕಾರಿ ಟಿ.ಎನ್.ಶಿವಶಂಕರ್, ಜಿ. ತಿಪ್ಪೇಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.