ಬಾಬರಿ ಮಸೀದಿ ಪ್ರಕರಣದಲ್ಲಿ ಬಿಜೆಪಿನಾಯಕರ ವಿರುದ್ಧ ತೀರ್ಪು ಜಾತ್ಯತೀತ ಮೌಲ್ಯಗಳನ್ನು ಬಲಪಡಿಸಿದೆ: ವಿಎಸ್
ತಿರುವನಂತಪುರಂ, ಎ. 20: ಬಾಬರಿ ಮಸೀದಿ ಪ್ರಕರಣದಲ್ಲಿ ಬಿಜೆಪಿ ನಾಯಕರ ವಿರುದ್ಧ ವಿಚಾರಣೆ ಮುಂದುವರಿಸಲು ಸುಪ್ರೀಂಕೋರ್ಟು ನೀಡಿದ ತೀರ್ಪು ದೇಶದ ಜಾತ್ಯತೀತ ಮೌಲ್ಯವನ್ನು ಬಲಪಡಿಸುತ್ತದೆ ಎಂದು ಕೇರಳದ ಮಾಜಿ ಮುಖ್ಯಮಂತ್ರಿ, ಕಮ್ಯುನಿಸ್ಟ್ ನಾಯಕ ,ಕೇರಳ ಆಡಳಿತ ಸುಧಾರಣ ಆಯೋಗದ ಅಧ್ಯಕ್ಷ ವಿ.ಎಸ್. ಅಚ್ಯುತಾನಂದ್ ಪ್ರತಿಕ್ರಿಯಿಸಿದ್ದಾರೆ.
ಒಳಸಂಚಿನಲ್ಲಿ ಶಾಮಿಲಾಗಿದ್ದ ಕಲ್ಯಾಣ್ ಸಿಂಗ್ ಈಗ ರಾಜ್ಯಪಾಲರು , ಉಮಾ ಭಾರತಿ ಕೇಂದ್ರಸಚಿವೆಯಾಗಿದ್ದಾರೆ. ಇವರು ತಮ್ಮ ಸ್ಥಾನಗಳಿಗೆ ರಾಜೀ ನಾಮೆ ನೀಡಬೇಕು. ರಾಜೀ ನಾಮೆ ನೀಡಲು ನಿರಾಕರಿಸಿದರೆ ಇವರನ್ನು ಆಯಾ ಸ್ಥಾನದಿಂದ ವಜಾಗೊಳಿಸಲು ಸಂಬಂಧ ಪಟ್ಟವರು ಕ್ರಮಕೈಗೊಳ್ಳಬೇಕು ಎಂದು ಅಚ್ಯುತಾನಂದನ್ ಹೇಳಿದರು.
ಬಿಜೆಪಿಯ ತೀವ್ರಹಿಂದುತ್ವ ನಿಲುವು, ಈ ಜನರು ನಡೆಸುತ್ತಿರುವ ದಾಳಿಗಳು, ಕೊಲೆಪಾತಕಗಳು ಹೆಚ್ಚುತ್ತಿರುವ ಕಾಲ ಇದಾಗಿದೆ. ಪ್ರಕರಣದಲ್ಲಿ ಬಿಜೆಪಿ ನಾಯಕರ ಒಳಸಂಚು ಪ್ರಕರಣವಿಚಾರಣೆಗೆ ಸಮಯ ನಿಗದಿಗೊಳಿಸಿದ ಸುಪ್ರೀಂಕೋರ್ಟು ತೀರ್ಪನ್ನು ತಾನು ಸ್ವಾಗತಿಸುತ್ತೇನೆ ಎಂದು ಅಚ್ಯುತಾನಂದನ್ ಹೇಳಿದ್ದಾರೆ.