"ನಂಡೆ ಪೆಂಙಳ್" ನಿಯೋಗದಿಂದ ಮುಖ್ಯಮಂತ್ರಿಯ ಭೇಟಿ
Update: 2017-04-20 18:46 IST
ಮಂಗಳೂರು, ಎ.20: "ನಂಡೆ ಪೆಂಙಳ್" ಅಭಿಯಾನದ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ವಿಧಾನಸೌಧದ ಕಚೇರಿಯಲ್ಲಿ ಭೇಟಿ ಮಾಡಿ ಅಭಿಯಾನದ ಕುರಿತು ಚರ್ಚಿಸಿತು.
"ನಂಡೆ ಪೆಂಙಳ್" ಅಭಿಯಾನದ ಎಲ್ಲಾ ಫಲಾನುಭವಿಗಳಿಗೆ "ಶಾದಿಭಾಗ್ಯ" ಯೋಜನೆಯಡಿಯಲ್ಲಿ ಸಹಾಯಧನವನ್ನು ಬಿಡುಗಡೆ ಮಾಡುವಂತೆ ಹಾಗೂ ಮದುವೆಗಳಿಗೆ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗೆ ಈ ಸಂದರ್ಭ ಮನವಿ ಸಲ್ಲಿಸಲಾಯಿತು.
ನಿಯೋಗದಲ್ಲಿ ಸಚಿವ ಯು.ಟಿ.ಖಾದರ್, "ನಂಡೆ ಪೆಂಙಳ್" ಸ್ವಾಗತ ಸಮಿತಿಯ ಅಧ್ಯಕ್ಷ ನೌಷಾದ್ ಹಾಜಿ ಸೂರಲ್ಪಾಡಿ, ಉಪಾಧ್ಯಕ್ಷ ಬಿ.ಎಚ್ ಅಸ್ಗರ್ ಹಾಜಿ, ಕೋಶಾಧಿಕಾರಿ ಅಬ್ದುರ್ರವೂಫ್ ಪುತ್ತಿಗೆ, ಕಾರ್ಯದರ್ಶಿ ನಿಸಾರ್ ಮುಹಮ್ಮದ್, ಸಂಘಟನಾ ಕಾರ್ಯದರ್ಶಿ ರಿಯಾಝ್ ಕಣ್ಣೂರು, ಸಂಚಾಲಕ ಮುಹಮ್ಮದ್ ಯು. ಬಿ ಹಾಗೂ ಉದ್ಯಮಿಗಳಾದ, ರಿಯಾಝ್ ಬಾವ, ಶೌಕತ್ ಶೌರಿ, ಇಮ್ತಿಯಾಝ್, ಬಿ.ಎ. ನಝೀರ್ ಮತ್ತಿತರರು ಉಪಸ್ಥಿತರಿದ್ದರು.