×
Ad

ಚುನಾವಣಾ ಆಯೋಗದಿಂದ ಜುಲೈನೊಳಗೆ 30,000 ಹೊಸ ವಿವಿಪಿಎಟಿ ಯಂತ್ರ ಖರೀದಿ

Update: 2017-04-20 19:48 IST

 ಹೊಸದಿಲ್ಲಿ,ಎ.20: ಈ ವರ್ಷದ ಉತ್ತರಾರ್ಧದಲ್ಲಿ ನಡೆಯಲಿರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ಪ್ರತಿ ಮತಗಟ್ಟೆಯಲ್ಲಿಯೂ ಮತದಾನ ದೃಢೀಕರಣ ಯಂತ್ರ(ವಿವಿಪಿಎಟಿ)ವನ್ನು ಸ್ಥಾಪಿಸಲು ನಿರ್ಧರಿಸಿರುವ ಚುನಾವಣಾ ಆಯೋಗವು ಜುಲೈನೊಳಗೆ 30,000 ಹೊಸ ಯಂತ್ರಗಳನ್ನು ಖರೀದಿಸ ಲಿದೆ.

ನಾವೀಗಾಗಲೇ 53,500 ವಿವಿಪಿಎಟಿಗಳನ್ನು ಹೊಂದಿದ್ದೇವೆ. ಮುಂದಿನ ಮೂರು ತಿಂಗಳುಗಳಲ್ಲಿ 30,000 ಹೊಸಯಂತ್ರಗಳನ್ನು ಪಡೆಯಲಿದ್ದೇವೆ. ಸುಮಾರು 84,000 ವಿವಿಪಿಎಟಿ ಯಂತ್ರಗಳು ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳ ಮತಗಟ್ಟೆಗಳಲ್ಲಿ ಬಳಸಲು ಸಾಕು ಎಂದು ಆಯೋಗದ ಅಧಿಕಾರಿಯೋರ್ವರು ಗುರುವಾರ ಇಲ್ಲಿ ತಿಳಿಸಿದರು.

ಚುನಾವಣಾ ವೇಳಾಪಟ್ಟಿ ಪ್ರಕಟಣೆ ಸಂದರ್ಭ ಇವೆರಡೂ ರಾಜ್ಯಗಳ ಎಲ್ಲ ಮತಗಟ್ಟೆಗಳಲ್ಲಿ ವಿವಿಪಿಎಟಿ ಯಂತ್ರಗಳನ್ನು ಬಳಸುವುದಾಗಿ ಆಯೋಗವು ವಿಧ್ಯುಕ್ತವಾಗಿ ಪ್ರಕಟಿಸಲಿದೆ.

 ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆಗಳ ಅವಧಿ ಅನುಕ್ರಮವಾಗಿ ಮುಂದಿನ ವರ್ಷದ ಜನವರಿ 2 ಮತ್ತು 7ಕ್ಕೆ ಅಂತ್ಯಗೊಳ್ಳಲಿದ್ದು, ಇವೆರಡೂ ರಾಜ್ಯಗಲ್ಲಿ ಡಿಸೆಂಬರ್‌ನಲ್ಲಿ ಚುನಾವಣೆಗಳು ನಡೆಯುವ ಸಾಧ್ಯತೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News