ಎ.23: ಎಸ್ಕೆಎಸ್ಸೆಸ್ಸೆಫ್ ‘ಮದೀನಾ ಪ್ಯಾಶನ್’ ಜಿಲ್ಲಾ ಸಮ್ಮೇಳನ

Update: 2017-04-20 15:18 GMT

ಮಂಗಳೂರು, ಎ.20: ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿಯ ನಿರ್ದೇಶನದಂತೆ ದೇಶದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಹಮ್ಮಿಕೊಳ್ಳುವ ಇಸ್ಲಾಮಿನ ಸಹಿಷ್ಣುತೆಯ ಮತ್ತು ಪರಂಪರೆಯ ಸಂದೇಶ ಸಾರುವ ‘ಮದೀನಾ ಪ್ಯಾಶನ್’ ಸಮ್ಮೇಳನವು ಎ.23ರಂದು ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಸಮಿತಿ ವತಿಯಿಂದ ಕೃಷ್ಣಾಪುರದ ಹುದೈಬಿಯಾ ನಗರದಲ್ಲಿ ನಡೆಯಲಿದೆ.

ಅಂದು ಬೆಳಗ್ಗೆ 8 ಗಂಟೆಗೆ ಬಂದರ್ ಜಲಾಲ್ ಮೌಲಾ ದರ್ಗಾ ಝಿಯಾರತ್ ಮತ್ತು 8:30ಕ್ಕೆ ಧ್ವಜಾರೋಹಣ ನಡೆಯಲಿದೆ. 8:45ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಇಸ್ಹಾಕ್ ಫೈಝಿ ವಹಿಸಲಿದ್ದು, ಅಝ್ಹರ್ ಫೈಝಿ ದುಆ ನಿರ್ವಹಿಸಲಿದ್ದಾರೆ. ‘ಇಹ್ಸಾನ್’ ವಿಷಯದಲ್ಲಿ ಅಮೀರ್ ಹುಸೈನ್ ಹುದವಿ ತರಬೇತಿ ನೀಡಲಿದ್ದಾರೆ. ‘ನಮ್ಮ ಆದರ್ಶ’ ವಿಷಯದಲ್ಲಿ ಮುಸ್ತಫಾ ಅಶ್ರಫಿ ಕಕ್ಕುಪ್ಪಡಿ ವಿಷಯ ಮಂಡಿಸಲಿದ್ದಾರೆ.

ಮಧ್ಯಾಹ್ನ 1:30ಕ್ಕೆ ಖಾಸಿಂ ದಾರಿಮಿ ಕಿನ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಶಿಬಿರವನ್ನು ಸ್ವದಖತುಲ್ಲಾಹ್ ಫೈಝಿ ಉದ್ಘಾಟಿಸಲಿದ್ದಾರೆ. ‘ಎಸ್ಕೆಎಸ್ಸೆಸ್ಸೆಫ್ ವಿಥ್ ನ್ಯೂ ಜೆನ್‌ಹೊಪ್’ ವಿಷಯದಲ್ಲಿ ಮುಹಮ್ಮದ್ ಬಶೀರ್ ಅಸ್ಹದಿ ಹಾಗೂ ‘ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿ ಸಂಘಟನೆ’ ವಿಷಯದಲ್ಲಿ ಸತ್ತಾರ್ ಪಂದಲ್ಲೂರ್ ತರಬೇತಿ ನೀಡಲಿದ್ದಾರೆ. ಸಂಜೆ 4:30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಚಿವರಾದ ಬಿ.ರಮಾನಾಥ ರೈ, ಯು.ಟಿ. ಖಾದರ್, ಮುಖ್ಯಸಚೇತಕ ಐವನ್ ಡಿಸೋಜ, ಶಾಸಕರಾದ ಮೊಯ್ದಿನ್ ಬಾವ, ಜೆ.ಆರ್. ಲೋಬೊ ಭಾಗವಹಿಸಲಿದ್ದಾರೆ.

ದ.ಕ. ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಎಸ್ಕೆಎಸ್ಸೆಸ್ಸೆಫ್‌ನ ಕೇಂದ್ರ ಸಮಿತಿ ಅಧ್ಯಕ್ಷ ಸೈಯದ್ ಹಮೀದಲಿ ಶಿಹಾಬ್ ತಂಙಳ್‌ ಪಾಣಕ್ಕಾಡ್ ದುಃಆ ನೆರವೇರಿಸಲಿದ್ದಾರೆ. ಸಮಸ್ತ ದಕ್ಷಿಣ ಕರ್ನಾಟಕ ಮುಶಾವರ ಅಧ್ಯಕ್ಷ ಝೈನುಲ್ ಆಬಿದೀನ್ ತಂಙಳ್ ಉದ್ಘಾಟಿಸಲಿದ್ದಾರೆ. ಸಮಸ್ಯ ಮುಶಾವರ ಉಪಾಧ್ಯಕ್ಷರಾಗಿ ಆಯ್ಕೆಯಾದ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್‌ರಿಗೆ ಸನ್ಮಾನ ನಡೆಯಲಿದೆ.

ಸ್ವಾಗತ ಸಮಿತಿಯ ಅಧ್ಯಕ್ಷ ಜಲೀಲ್ ಬದ್ರಿಯಾ ಕೃಷ್ಣಾಪುರ ಸ್ವಾಗತಿಸಲಿದ್ದಾರೆ. ಇಸ್ಹಾಖ್ ಫೈಝಿ ದಿಕ್ಸೂಚಿ ಹಾಗೂ ಅಝೀಝ್ ದಾರಿಮಿ ಚೊಕ್ಕಬೆಟ್ಟು ಭಾಷಣಗೈಯಲಿದ್ದಾರೆ. ಬಿ.ಕೆ. ಅಬ್ದುಲ್ ಖಾದರ್ ಅಲ್ ಖಾಸಿಮಿ ಮಜ್ಲಿಸುನ್ನೂರಿಗೆ ನೇತೃತ್ವ ವಹಿಸಲಿದ್ದಾರೆ. ಮೂಡಿಗೆರೆ ಖಾಝಿ ಎಂ.ಎ. ಖಾಸಿಂ ಮುಸ್ಲಿಯಾರ್, ಸತ್ತಾರ್ ಪಂದಲ್ಲೂರು, ಅಝೀಝ್ ಅಶ್ರಫಿ ಪಾಣತ್ತೂರು, ಶಿಹಾಬುದ್ದೀನ್ ಅಲ್‌ಅಮಾನಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಎಸ್ಕೆಎಸ್ಸೆಸ್ಸೆಫ್‌ನ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News