ಭೂಮಿಯನ್ನು ಹೋಲುವ ಇನ್ನೊಂದು ಗ್ರಹ ಪತ್ತೆ

Update: 2017-04-20 15:31 GMT

ವಾಶಿಂಗ್ಟನ್, ಎ. 20: ಹೆಚ್ಚು ಬಿಸಿಯೂ ಅಲ್ಲದ, ಹೆಚ್ಚು ಶೀತವೂ ಅಲ್ಲದ ಜೀವಿಗಳಿಗೆ ಪೂರಕವಾದ ವಾತಾವರಣವಿರುವಂತೆ ಕಂಡುಬರುವ ಇನ್ನೊಂದು ಗ್ರಹವನ್ನು ಖಗೋಳ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ನೂತನ ಗ್ರಹವು ಭೂಮಿಗಿಂತ ಹೆಚ್ಚು ದೂರದಲ್ಲಿಯೂ ಇಲ್ಲ.

ಹೊಸ ಬೃಹತ್ ಹಾಗೂ ದಟ್ಟ ಗ್ರಹ ಭೂಮಿಯಂತೆ ಬಂಡೆಗಲ್ಲು ಮತ್ತು ಮಣ್ಣು ಹೊಂದಿದೆ. ನೀರಿಗೆ ಬೇಕಾಗುವಷ್ಟು ಉಷ್ಣತೆಯನ್ನು ಅದು ಹೊಂದಿದ್ದು, ಜೀವಿಗಳ ವಾಸಕ್ಕೆ ಪೂರಕವಾದ ವಲಯದಲ್ಲಿದೆ.

‘ನೇಚರ್’ ಪತ್ರಿಕೆಯಲ್ಲಿ ಬುಧವಾರ ಪ್ರಕಟಗೊಂಡ ಅಧ್ಯಯನ ವರದಿ ಈ ಘೋಷಣೆಯನ್ನು ಮಾಡಿದೆ.ಇದು ಒಂದು ವರ್ಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಸೌರವ್ಯೆಹದಿಂದ ಹೊರಗೆ ಪತ್ತೆಯಾಗಿರುವ ಹಾಗೂ ಜೀವಿಗಳ ಸಾಧ್ಯತೆ ಇರುವ ಐದನೆ ಇಂಥ ಗ್ರಹವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News