ಟ್ಯಾಲೆಂಟ್ ವತಿಯಿಂದ ಉಚಿತ ನೋಟು ಪುಸ್ತಕಗಳ ವಿತರಣೆ: ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

Update: 2017-04-21 05:58 GMT

ಮಂಗಳೂರು, ಎ.20: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಪ್ರತೀ ವರ್ಷದಂತೆ ಈ ಬಾರಿಯೂ ಆರ್ಥಿಕವಾಗಿ ಹಿಂದುಳಿದಿರುವ 1,200 ವಿದ್ಯಾರ್ಥಿಗಳಿಗೆ ಉಚಿತ ನೋಟು ಪುಸ್ತಕಗಳನ್ನು ವಿತರಿಸಲಿದ್ದು, ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.

ಒಂದನೆ ತರಗತಿಯಿಂದ ಪಿ.ಯು.ಸಿ. ತನಕ ಓದುತ್ತಿರುವ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕಗಳನ್ನು ವಿತರಿಸಲಾಗುವುದು. ಆರ್ಥಿಕವಾಗಿ ಹಿಂದುಳಿದವರಿಗೆ ಮತ್ತು ಸರಕಾರಿ ಶಾಲೆಗಳ ಮಕ್ಕಳಿಗೆ ಮೊದಲ ಆದ್ಯತೆ. ಅರ್ಜಿದಾರರ ಆರ್ಥಿಕ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರವೇ ಪುಸ್ತಕವನ್ನು ನೀಡಲಾಗುವುದು. ಶಾಲಾ ಮುಖ್ಯಸ್ಥರಿಂದ ದೃಢೀಕರಿಸಿದ ನೋಟು ಪುಸ್ತಕಗಳ ಪಟ್ಟಿ ಹಾಗೂ ರೇಷನ್ ಕಾರ್ಡನ್ನು ಅರ್ಜಿಯೊಂದಿಗೆ ಕಡ್ಡಾಯವಾಗಿ ಲಗತ್ತಿಸುವುದು. ನೋಟು ಪುಸ್ತಕ ವಿತರಣಾ ಸಮಾರಂಭದಲ್ಲಿ ನೇರವಾಗಿ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಗುತ್ತದೆ. ವಿದ್ಯಾರ್ಥಿಗಳ ಹೆತ್ತವರು ಅರ್ಜಿಯನ್ನು ನಮ್ಮ ಕಚೇರಿಯಿಂದ ಪಡೆದು ಜಮಾಅತ್‌ನಿಂದ ದೃಢೀಕರಿಸಿ ಮೇ 10ರೊಳಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ವಿಶ್ವಾಸ್ ಕ್ರೌನ್, ಕಂಕನಾಡಿ ಮಂಗಳೂರು-2 ದೂರವಾಣಿ-0824-4267883, 9972283365, 9743715388 ಅನ್ನು ಸಂರ್ಪಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News