ಜಾತ್ಯತೀತರ ಮಹಾಮೈತ್ರಿ ಪ್ರಯತ್ನ ಒಳ್ಳೆಯ ಬೆಳವಣಿಗೆ : ಸಿದ್ಧರಾಮಯ್ಯ

Update: 2017-04-21 15:51 GMT

ಬಾರಕೂರು, ಎ.21: ಕೋಮುವಾದಿ ಶಕ್ತಿಗಳನ್ನು ಮಣಿಸಲು ಜಾತ್ಯತೀತ ಶಕ್ತಿಗಳು ಒಂದಾಗುವುದು ಒಳ್ಳೆಯ ಬೆಳವಣಿಗೆ. ಈ ಹಿನ್ನೆಲೆಯಲ್ಲಿ ಹೊಸದಿಲ್ಲಿ ಯಲ್ಲಿ ಸೋನಿಯಾ ಗಾಂಧಿ ಹಾಗೂ ನಿತೀಶ್‌ಕುಮಾರ್ ಅವರ ಭೇಟಿಯನ್ನು ತಾವು ಸ್ವಾಗತಿಸುವುದಾಗಿ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.

 ಬಾರಕೂರಿನಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ ಸಿದ್ಧರಾಮಯ್ಯ ಅವರು ಬಾರಕೂರಿನ ನೇಶನಲ್ ಕಾಲೇಜು ಮೈದಾನದಲ್ಲಿ ನಿರ್ಮಿಸಲಾಗಿದ್ದ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.

ಜಾತ್ಯತೀತ ಶಕ್ತಿಗಳ ಮತವಿಭಜನೆಯಿಂದ ದೇಶದಲ್ಲಿ ಕೋಮುವಾದಿ ಶಕ್ತಿಗಳಿಗೆ ಗೆಲ್ಲಲು ಸಾಧ್ಯವಾಗುತ್ತಿದೆ ಎಂದರು. ಹಾಗಿದ್ದರೆ ಕರ್ನಾಟಕದಲ್ಲಿ ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಿರಾ ಎಂದು ಕೇಳಿದಾಗ, ಉತ್ತರ ಪ್ರದೇಶ ಪರಿಸ್ಥಿತಿ ಬೇರೆ, ಕರ್ನಾಟಕದ್ದು ಬೇರೆ ಎಂದರು.

ರಾಜ್ಯದಲ್ಲಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಇಲ್ಲ ಎಂದು ಸ್ಪಷ್ಟ ಪಡಿಸಿದ ಸಿದ್ಧರಾಮಯ್ಯ, ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ನಿಲ್ಲಿಸಿರಲಿಲ್ಲ. ಇದರಿಂದ ನಮಗೆ ಗೆಲ್ಲಲು ಸಹಾಯವಾಗಿದೆ. ಗೆಲುವಿಗೆ ಅದೊಂದೇ ಕಾರಣವಲ್ಲ ಎಂದ ಸಿದ್ಧರಾಮಯ್ಯ ಮಹಾಚುನಾವಣೆಯಲ್ಲಿ ಮೈತ್ರಿ ಸಾಧ್ಯತೆಯನ್ನು ತಳ್ಳಿಹಾಕಿದರು.

ರಾಜ್ಯದಲ್ಲಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಇಲ್ಲ ಎಂದು ಸ್ಪಷ್ಟ ಪಡಿಸಿದ ಸಿದ್ಧರಾಮಯ್ಯ, ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಗಳಲ್ಲಿ ಜೆಡಿಎಸ್ ಅ್ಯರ್ಥಿಗಳನ್ನುನಿಲ್ಲಿಸಿರಲಿಲ್ಲ.ಇದರಿಂದನಮಗೆಗೆಲ್ಲಲುಸಹಾಯವಾಗಿದೆ.ಗೆಲುವಿಗೆಅದೊಂದೇಕಾರಣವಲ್ಲಎಂದಸಿದ್ಧರಾಮಯ್ಯಮಹಾಚುನಾವಣೆಯಲ್ಲಿಮೈತ್ರಿಸ್ಯಾತೆಯನ್ನು ತಳ್ಳಿಹಾಕಿದರು. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನು ಹೈಕಮಾಂಡ್ ನಿರ್ಧರಿಸಲಿದೆ. ಈಗಾಗಲೇ ಅನೇಕ ಹೆಸರುಗಳು ಚಲಾವಣೆಯಲ್ಲಿವೆ. ಅಂತಿಮವಾಗಿ ಸಮರ್ಥ ಅಭ್ಯರ್ಥಿ ಯಾರೆಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಅದನ್ನು ನಾವು ಒಪ್ಪಿಕೊಳ್ಳಬೇಕು ಎಂದರು. ಸಚಿವ ಸಂಪುಟದ ಎರಡು ಸ್ಥಾನ ಹಾಗೂ 3 ಎಂಎಲ್‌ಸಿ ಸ್ಥಾನಗಳ ಕುರಿತಂತೆ ಹೈಕಮಾಂಡ್ ಜೊತೆ ಮಾತನಾಡಿದ್ದೇನೆ. ಶೀಘ್ರವೇ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಶಿಸ್ತೇ ಶಿಸ್ತು: ಬಿಜೆಪಿಯವರಿಗೆ ಅಶಿಸ್ತೇ ಶಿಸ್ತಾಗಿದೆ. ಅಲ್ಲಿ ಶಿಸ್ತು ಯಾವತ್ತೂ ಇರಲಿಲ್ಲ. ಈಶ್ವರಪ್ಪ ಸೇರಿದಂತೆ ಅನೇಕ ಮುಖಂಡರು ಯಡಿಯೂರಪ್ಪ ವಿರುದ್ಧ ಒಳಗೆ ಕತ್ತಿ ಮಸೆಯುತ್ತಿರುತ್ತಾರೆ.ಅದು ಯಾವಾಗ ಸ್ಪೋಟಗೊಳ್ಳುತ್ತೊ ಗೊತ್ತಿಲ್ಲ ಎಂದರು.

ಕರ್ನಾಟಕದಲ್ಲಿ ಬಿಜೆಪಿಯ ಮಿಶನ್ 150+ ಟಾರ್ಗೆಟ್ ಕುರಿತು ಕೆಂಡಕಾರಿದ ಸಿದ್ಧರಾಮಯ್ಯ, ಇದನ್ನು ಅವರಿಗೆ ಕೊಟ್ಚವರ್ಯಾರು. ಯಡಿಯೂರಪ್ಪ ಹೇಳಿದಾಕ್ಷಣ ಮಿಶನ್ 150 ಆಗಲ್ಲ. ಜನರೇನು ಅವರಿಗೆ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರು.

ಕರಾವಳಿಗೆ ಪ್ರತ್ಯೇಕ ಮರಳು ನೀತಿ ಜಾರಿಗೊಳಿಸುವುದಾಗಿ ಹೇಳಿದ ಸಿದ್ಧರಾಮಯ್ಯ, ಜಿಲ್ಲಾಧಿಕಾರಿ ಹಾಗೂ ಕಂದಾಯ ಅಧಿಕಾರಿಗಳ ಮೇಲೆ ಹಲ್ಲೆಗೆ ಪ್ರಯತ್ನಿಸಿದವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರಲ್ಲದೇ, ಬಾಕಿ ಆರೋಪಿಗಳು ಎಷ್ಟೇ ಪ್ರಬಲರಾದರೂ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಪುನಶ್ಚೇತನದ ಕುರಿತಂತೆ ಕೇಳಿದ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದ ಮುಖ್ಯಮಂತ್ರಿಗಳು ಇಲ್ಲಿ ಕಬ್ಬು ಹೆಚ್ಚು ಬೆಳೆಯಬೇಕು ಹಾಗೂ ಕಬ್ಬಿನ ಇಳುವರಿ ಚೆನ್ನಾಗಿರಬೇಕು ಎಂದರು.

ಸಿದ್ಧರಾಮಯ್ಯ ಇತ್ತೀಚೆಗೆ ಪದೇ ಪದೇ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುತ್ತಿರುವ ಕುರಿತು ಪ್ರಶ್ನಿಸಿದಾಗ, ನಾನು ಯಾವತ್ತೂ ದೇವರ ವಿರುದ್ಧ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ವಿರುದ್ಧ ಇಲ್ಲ. ಆದರೆ ಪದೇ ಪದೇ ದೇವರ ಮೊರೆ ಹೋಗೊಲ್ಲ. ದೇವರನ್ನು ಹುಡುಕಿಕೊಂಡು ಕಾಶ್ಮೀರಕ್ಕೆಲ್ಲ ಹೋಗೊಲ್ಲ. ನನಗೆ ನಮ್ಮೂರ ದೇವರೇ ಸಾಕು ಎಂದುತ್ತರಿಸಿದರು.

ಉಡುಪಿ ಶ್ರೀಕೃಷ್ಣ ಮಠಕ್ಕೆ ಇನ್ನೂ ಭೇಟಿ ನೀಡದ ಕುರಿತು ಪ್ರಶ್ನಿಸಿದಾಗ, ಕೃಷ್ಣ ಮಠಕ್ಕೆ ಹೋಗುವ ಅವಕಾಶ ಸಿಕ್ಕಿಲ್ಲ ಅಷ್ಟೇ ಎಂದರು. ದೇವೇಗೌಡರೊಂದಿಗೆ ಒಳ್ಳೆಯ ಸಂಬಂಧ ಇರುವ ಕುರಿತು ಕೇಳಿದಾಗ, ದೇವೇಗೌಡರು ಮಾತ್ರವೇನು ಯಡಿಯೂರಪ್ಪರೊಂದಿಗೂ ಮಾತನಾಡುತ್ತೇನೆ. ರಾಜಕೀಯದಲ್ಲಿ ಎಂದೂ ಶಾಶ್ವತ ಮಿತ್ರರಿರುವಂತೆ ಶಾಶ್ವತ ಶತ್ರುಗಳೂ ಇರುವುದಿಲ್ಲ ಎಂದು ನಕ್ಕರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News