ಬೆಂಗಳೂರು ಆರೆಸ್ಸೆಸ್ ಮುಖಂಡನ ಕೊಲೆ : ಆರೋಪಿಗಳ ವಿಚಾರಣೆಗೆ ಎನ್ ಐ ಎ

Update: 2017-04-21 11:14 GMT

ಹೊಸದಿಲ್ಲಿ,ಎ.21: ಬೆಂಗಳೂರಿನ ಆರೆಸ್ಸೆಸ್ ಮುಖಂಡ ಆರ್.ರುದ್ರೇಶ (37) ಅವರ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಐವರು ಆರೋಪಿಗಳ ವಿರುದ್ಧ ಕಾನೂನುಕ್ರಮಜರುಗಿಸಲು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಅನುಮತಿ ನೀಡಿದೆ. 2016,ಅ.16ರಂದು ಎರಡು ಬೈಕ್‌ಗಳಲ್ಲಿ ಬಂದಿದ್ದ ದುಷ್ಕರ್ಮಿಗಳು ಆರ್.ರುದ್ರೇಶ ಅವರ ಹತ್ಯೆಗೈದಿದ್ದರು.

ಎನ್‌ಐಎ ಎ.27ರೊಳಗೆ ಪ್ರಕರಣದಲ್ಲಿ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದೆ.
ರುದ್ರೇಶ ಕೊಲೆ ನಡೆದ ಸ್ಥಳದಲ್ಲಿಯ ಸಿಸಿಟಿವಿ ಕ್ಯಾಮರಾಗಳಿಂದ ಲಭ್ಯ ಸುಳಿವುಗಳ ಆಧಾರದಲ್ಲಿ ಮುಹಮ್ಮದ್ ಸಾದಿಕ್ (35), ಮುಹಮ್ಮದ್ ಮುಜೀಬುಲ್ಲಾ (44), ವಾಸಿಂ ಅಹ್ಮದ್ (30) ಮತ್ತು ಇರ್ಫಾನ್ ಪಾಷಾ (30) ಎನ್ನುವವರನ್ನು ಬಂಧಿಸಿದ್ದ ಪೊಲೀಸರು, ಬಳಿಕ ಪಿಎಫ್‌ಐ ನಾಯಕ ಆಸಿಮ್ ಶರೀಫ್(40)ನನ್ನು ಕೂಡ ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News