ಮಸೂದೆ ಪ್ರತಿ ಸುಟ್ಟು ವಕೀಲರಿಂದ ಪ್ರತಿಭಟನೆ

Update: 2017-04-21 11:17 GMT

ಮಂಗಳೂರು, ಎ.21: ಭಾರತೀಯ ಕಾನೂನು ಆಯೋಗ ಕೇಂದ್ರಕ್ಕೆ ಸಲ್ಲಿಸಿದ ವಕೀಲರ ಕುರಿತಾದ ವರದಿ ಮತ್ತು ತಿದ್ದುಪಡಿ ಮಸೂದೆಯನ್ನು ವಿರೋಸಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಆದೇಶದಂತೆ ಮಂಗಳೂರು ವಕೀಲರ ಸಂಘ ಶುಕ್ರವಾರ ಮಂಗಳೂರಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಮಸೂದೆಯ ಪ್ರತಿಗಳನ್ನು ಸುಟ್ಟು ಪ್ರತಿಭಟನೆ ನಡೆಸಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಂಗಳೂರು ವಕೀಲರ ಸಂಘದ ಕಾರ್ಯದರ್ಶಿ ದಿನಕರ ಶೆಟ್ಟಿ,ವಕೀಲರ ಹಕ್ಕುಗಳಿಗೆ ಚ್ಯುತಿ ತರುವ ಅಸಂವಿಧಾನಿಕ ವಕೀಲರ(ತಿದ್ದುಪಡಿ) ಮಸೂದೆ 2017 ವಿರೋಸಿ ಈ ಪ್ರತಿಭಟನೆ ನಡೆಯುತ್ತಿದೆ ಎಂದರು.

ವಕೀಲರಿಗೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಯಲಿದೆ. ವಕೀಲರ ಹಕ್ಕುಗಳನ್ನು ಮೊಟಕುಗೊಳಿಸುವ ಕುರಿತ ವರದಿಯನ್ನು ಭಾರತೀಯ ಕಾನೂನು ಆಯೋಗ ಕೇಂದ್ರ ಕಾನೂನು ಮಂತ್ರಿಯವರಿಗೆ ಸಲ್ಲಿಸಿದೆ. ತಿದ್ದಪಡಿ ಮಸೂದೆ ಜಾರಿಯಾದರೆ ವಕೀಲರು ಸರಿಯಾಗಿ ಕಲಸ ನಿರ್ವಹಿಸಲು ಅಸಾಧ್ಯವಾಗಲಿದೆ ಎಂದರು.

ವಕೀಲ ವಿರೋಯಾಗಿ ವರ್ತಿಸುತ್ತಿರುವ ಕಾನೂನು ಆಯೋಗದ ಅಧ್ಯಕ್ಷ ಬಿ.ಎಸ್.ಚೌಹಾನ್ ಅವರು ತಕ್ಷಣ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು. ಅಲ್ಲದೆ ಕೇಂದ್ರ ಮೇ 1ರ ಒಳಗೆ ಮಸೂದೆಯನ್ನು ಕೈ ಬಿಡಬೇಕು. ವಕೀಲರಿಗೆ ನ್ಯಾಯ ಸಿಗದೇ ಇದ್ದಲ್ಲಿ ಮೇ 2ರಂದು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ನ್ಯಾಯಕ್ಕಾಗಿ ಜೈಲ್ ಬರೋ ಹಮ್ಮಿಕೊಳ್ಳಲಾಗುವುದು ಎಂದು ದಿನಕರ ಶೆಟ್ಟಿ ಹೇಳಿದರು.

ವಕೀಲರ ಸಂಘದ ಉಪಾಧ್ಯಕ್ಷೆ ಪುಷ್ಪಲತಾ ಮಾತನಾಡಿ ತಿದ್ದುಪಡಿ ಮಸೂದೆ ಜಾರಿಗೆ ಬಂದರೆ ವಕೀಲರಿಗೆ ಅನ್ಯಾಯವಾಗಲಿದೆ. ವಕೀಲರೊಬ್ಬರು ಕಾರಣಾಂತರಗಳಿಂದ ಕೋರ್ಟ್‌ಗೆ ಹಾಜರಾಗದೇ ಇದ್ದ ಸಂದರ್ಭದಲ್ಲಿ ಅವರು ಕೋರ್ಟ್‌ಗೆ ಪರಿಹಾರ ನೀಡಬೇಕೆಂಬ ಉಲ್ಲೇಖ ಈ ಮಸೂದೆಯಲ್ಲಿದೆ. ಇಂತಹ ಅನೇಕ ಅಂಶಗಳು ಈ ಮಸೂದೆಯಲ್ಲಿದ್ದು, ವಕೀಲರ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ ಎಂದು ಆರೋಪಿಸಿದರು.

ನ್ಯಾಯವಾದಿಗಳಾದ ದಿನೇಶ್ ಹೆಗ್ಡೆ ಉಳೇಪಾಡಿ, ಸುಜಿತ್ ಕುಮಾರ್, ಡೇನಿಯಲ್, ನಾರಾಯಣ, ಪ್ರಮೋದ್, ಕಿಶೋರ್, ಶ್ರೀಕುಮಾರ್, ರೂಪಾ, ಪ್ರಪುಲ್ಲಾ ಕುಮಾರಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News