ಬೆಂಗ್ರೆ ಕಸಬಾದಲ್ಲಿ 'ನಂಡೆ ಪೆಂಙಳ್' ಜಾಗೃತಿ ಕಾರ್ಯಕ್ರಮ

Update: 2017-04-21 11:37 GMT

ಮಂಗಳೂರು,ಎ.21, ಪ್ರಾಯ ಮೂವತ್ತು ಮೀರಿದ ಒಂದು ಸಾವಿರ ಹೆಣ್ಮಕ್ಕಳಿಗೆ ಮದುವೆ ಮಾಡಿಸುವ ಯೋಜನೆ “ನಂಡೆ ಪೆಂಙಳ್”  ಅಭಿಯಾನದ ಸಲುವಾಗಿ ಜಾಗೃತಿ ಕಾರ್ಯಕ್ರಮವು ಬೆಂಗ್ರೆಯಲ್ಲಿ ಅಭಿಯಾನದ ಸಹಭಾಗಿ ಸಂಘಟನೆಯಾದ ಓಲ್ಡ್ ಸ್ಟೂಡೆಂಟ್ಸ್ ಫೆಡೆರೇಶನ್ ಬೆಂಗ್ರೆ ಕಸಬಾ ಜಂಟಿ ಆಶ್ರಯದಲ್ಲಿ ಒ.ಎಸ್.ಎಫ್. ಸಭಾಂಗಣದಲ್ಲಿ ಇತ್ತೀಚಿಗೆ ನಡೆಯಿತು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಎಂ.ಜೆ.ಎಂ ಅಧ್ಯಕ್ಷರು ಅಬ್ದುಲ್ ಹಮೀದ್ ಹಾಜಿ, ಮಾಜಿ ಕಾರ್ಪೊರೇಟರ್ ಫಾರೂಖ್, ಖಿಲ್ರಿಯಾ ಮಸೀದಿ ಇಮಾಮ್ ನಾಸೀರ್ ಕೌಸರಿ, ಎಸ್ಕೆಎಸೆಸೆಫ್ ಬೆಂಗ್ರೆ ಯುನಿಟ್ ಅಧ್ಯಕ್ಷರು ಫಯಾಝ್ ಇಬ್ರಾಹಿಂ, ಹನೀಫ್, ಮುಸ್ತಫ, ಶೈಖ್ ನಿಸಾರ್, ಹಾರೂನ್ ಮೊದಲಾದವರು ಹಾಗೂ ಸ್ಥಳೀಯ ಹಲವು ಸಂಘ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ಒ.ಎಸ್.ಎಫ್. ಅಧ್ಯಕ್ಷರಾದ ಬಿಲಾಲ್ ಮೊದೀನ್ ವಹಿಸಿದರು. ನಂಡೆ ಪೆಂಙಳ್ ಅಭಿಯಾನದ ಪ್ರಚಾರ ಮುಖ್ಯಸ್ಥ ರಫೀಕ್ ಮಾಸ್ಟರ್ ಪ್ರಾಯ ಮೂವತ್ತು ದಾಟಿದ ಹೆಣ್ಮಕ್ಕಳ ದಾರುಣ ಬದುಕಿನ ಚಿತ್ರಣವನ್ನು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ವಿವರಿಸಿದರು. ನಂಡೆ ಪೆಂಙಳ್ ಸ್ವಾಗತ ಸಮಿತಿಯ ಕನ್ವಿನರ್ ಮೊಹಮ್ಮದ್ ಯು. ಬಿ ಸಮಾರೋಪ ಭಾಷಣ ಮಾಡಿದರು. ಎಂ.ಜೆ.ಎಂ. ಖತೀಬರು ಅಬ್ದುಲ್ಲ ರಹ್ಮಾನಿ ಬಾಂಬಿಲ ದುಅ ನೆರವೇರಿಸಿದರು. ಒ.ಎಸ್.ಎಫ್. ಸಲಹೆಗಾರದ ಉಮರ್ ದಾರಿಮಿ ಪಟ್ಟೋರಿ ಉದ್ಘಾಟನೆಗೈದರು. ಟಿ.ಆರ್.ಎಫ್‌ನ ಕಾರ್ಯಕ್ರಮ ಸಂಯೋಜಕ ಅಸ್ಪರ್ ಹುಸೈನ್ ಪ್ರಸ್ತಾವಿಕ ಭಾಷಣಗೈದರು. ಒ.ಎಸ್.ಎಫ್. ಪ್ರಧಾನ ಕಾರ್ಯದರ್ಶಿ ಉಮರಬ್ಬ ಸ್ವಾಗತಿಸಿ, ಅಬ್ದುಲ್ ಸಲಾಮ್ ಪೆರ್ನೆ ಧನ್ಯವಾದ ಮಾಡಿದರು. ಬಿ.ಎಮ್. ಅಸೀಫ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News