ಉಚ್ಚಿಲ: ಸಾಮೂಹಿಕ ಮುಂಜಿ ಕಾರ್ಯಕ್ರಮಕ್ಕೆ ಚಾಲನೆ

Update: 2017-04-21 12:11 GMT

ಉಳ್ಳಾಲ,ಎ.21: ಉಚ್ಚಿಲ ಡೈಮಂಡ್ ವೆಲ್ಫೇರ್ ಅಸೋಸಿಯೇಶನ್, ಜಂಇಯ್ಯತುಲ್ ಫಲಾಹ್ ನಗರ ಮತ್ತು ತಾಲೂಕು ಘಟಕದ ವತಿಯಿಂದ ಯೇನೆಪೊಯ ಆಸ್ಪತ್ರೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಐದು ದಿನಗಳ 40 ಬಡ ಮಕ್ಕಳಿಗೆ ಹಮ್ಮಿಕೊಳ್ಳಲಾಗಿದ್ದ ಉಚಿತ ಸಾಮೂಹಿಕ ಮುಂಜಿ ಕಾರ್ಯಕ್ರಮಕ್ಕೆ ಸೋಮವಾರ ಯೇನೆಪೊಯ ಆಸ್ಪತ್ರೆಯಲ್ಲಿ ಚಾಲನೆ ನೀಡಲಾಯಿತು.

 ಯೇನೆಪೊಯ ಆಸ್ಪತ್ರೆಯ ಉಪವೈದ್ಯಾಧಿಕಾರಿ ಪದ್ಮನಾಭ, ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಮೂಸಬ್ಬ, ಆರೋಗ್ಯ ವಿಮಾ ಯೋಜನೆ ವಿಭಾಗ ಮುಖ್ಯಸ್ಥ ಅಬ್ದುಲ್ ಅಝೀರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಡೈಮಂಡ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಸಂಶುದ್ದೀನ್ ಉಚ್ಚಿಲ್, ಸಲಹೆಗಾರ ರಶೀದ್ ಇಂಜಿನಿಯರ್, ಸಂಘಟನೆಯ ರಕ್ತ ಸಂಗ್ರಹ ವಿಭಾಗ ಮುಖ್ಯಸ್ಥ ಮುಸ್ತಫಾ ಮಕ್ಯಾರ್ ಮೊದಲಾದವರು ಭಾಗವಹಿಸಿದ್ದಾರೆ.

ಉಚಿತ ಸಾಮೂಹಿಕ ಮುಂಜಿ ಕಾರ್ಯಕ್ರಮವು ಶನಿವಾರದವರೆಗೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News