ಮೊಂಟುಗೋಳಿ ಸೆಕ್ಟರ್‌ನಿಂದ ಕೆರಿಯರ್ ಗೈಡೆನ್ಸ್ ಸೆಮಿನಾರ್
Update: 2017-04-21 18:01 IST
ಕೊಣಾಜೆ,ಎ.21 : ಎಸ್ಸೆಸ್ಸೆಫ್ ಮೊಂಟುಗೋಳಿ ಸೆಕ್ಟರ್ ವತಿಯಿಂದ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ನಂತರ ಮುಂದೆನು.? ಎಂಬ ವಿಷಯದಲ್ಲಿ ಕೆರಿಯರ್ ಗೈಡೆನ್ಸ್ ಸೆಮಿನಾರ್ ಎಪ್ರಿಲ್ 22 ಶನಿವಾರ ಬೆಳಿಗ್ಗೆ 9:00 ಗಂಟೆಗೆ ಅಲ್-ಮದೀನಾ ಯತೀಂ ಖಾನದಲ್ಲಿ ಸೆಕ್ಟರ್ ಅಧ್ಯಕ್ಷ ಮನ್ಸೂರ್ ಹಿಮಮಿ ಮೊಂಟೆಪದವು ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪಬ್ಲಿಕ್ ಪರೀಕ್ಷೆಯನ್ನು ಬರೆದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮದ ಪ್ರಯೋಜನವನ್ನು ಪಡೆಯಬೇಕೆಂದು ಸೆಕ್ಟರ್ ಕೆರಿಯರ್ ಗೈಡೆನ್ಸ್ ಸಂಚಾಲಕ ನಿಯಾರ್ ಪಡಿಕ್ಕಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.