×
Ad

ಅನಿವಾಸಿ ಬಿಲ್ಲವರ ಸಂಘಟನೆ : ಪದಾಧಿಕಾರಿಗಳ ಆಯ್ಕೆ

Update: 2017-04-21 18:24 IST

ಬಹರೈನ್, ಎ.21: ಅನಿವಾಸಿ ಬಿಲ್ಲವರ ಸಂಘಟನೆ ಗುರು ಸೇವಾ ಸಮಿತಿ ಬಹರೈನ್ ಬಿಲ್ಲವಾಸ್‌ನ ಮಹಾಸಭೆಯು ಕರ್ನಾಟಕ ಸೋಶಿಯಲ್ ಕ್ಲಬ್‌ನಲ್ಲಿ ಇತ್ತೀಚೆಗೆ ಜರಗಿದ್ದು, 2017-18ರ ಸಾಲಿನ ನೂತನ ಅಧ್ಯಕ್ಷರಾಗಿ ಅಜಿತ್ ಬಂಗೇರ ಸರ್ವಾನುಮತದಿಂದ ಆರಿಸಲಾಯಿತು.

  ಉಪಾಧ್ಯಕ್ಷರಾಗಿ ಹೇಮಂತ್ ಸಾಲಿಯಾನ್, ಪ್ರಧಾನ ಕಾರ್ಯದರ್ಶಿಯಾಗಿ ಹರಿನಾಥ್ ಸುವರ್ಣ, ಉಪ ಕಾರ್ಯದರ್ಶಿಯಾಗಿ ನಿತ್ಯಾನಂದ ಸುವರ್ಣ, ಕೋಶಾಧಿಕಾರಿಯಾಗಿ ಅಶೋಖ್ ಕಟೀಲ್, ಸಹಕೋಶಾಧಿಕಾರಿಯಾಗಿ ಹರೀಶ್ ಕುಮಾರ್, ಉಪ ಮನೋರಂಜನೆ ಕಾರ್ಯದರ್ಶಿಯಾಗಿ ಹಿತಿನ್ ಪೂಜಾರಿ, ಮನೋರಂಜನೆ ಕಾರ್ಯದರ್ಶಿಯಾಗಿ ಪ್ರದೀಪ್ ಸುದೇಕರ್, ಕ್ರೀಡಾ ಕಾರ್ಯದರ್ಶಿಯಾಗಿ ಚಿರಾಗ್ ಸುವರ್ಣ, ಸದಸ್ಯರುಗಳಾಗಿ ಪುರು ಷೋತ್ತಮ್ ಪೂಜಾರಿ, ರಾಜ್ ಪೂಜಾರಿ ಬೆದ್ರ ಅವರು ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News