ಕಾಪು ಬ್ಲಾಕ್ ಕಿಸಾನ್ ಕಾಂಗ್ರೆಸ್ ಸಮಿತಿ ಪುನರ್‌ರಚನೆ
ಉಡುಪಿ, ಎ.21: ಉಡುಪಿ ಜಿಲ್ಲಾ ಕಾಪು ಬ್ಲಾಕ್(ದಕ್ಷಿಣ) ಕಾಂಗ್ರೆಸ್ ಕಿಸಾನ್ ಘಟಕ ಸಮಿತಿಯನ್ನು ಪುನರಚಿಸಲಾಗಿದ್ದು, ಅಧ್ಯಕ್ಷರಾಗಿ ಸದಾನಂದ ಶೆಟ್ಟಿ ಕೊಡು ಶಿರ್ವ ಅವರನ್ನು ಆಯ್ಕೆ ಮಾಡಲಾಗಿದೆ.
ಉಪಾಧ್ಯಕ್ಷರಾಗಿ ನ್ಯಾಯವಾದಿ ಶಿವಾನಂದ ಅಮಿನ್ ಪಾಂಗಾಳ, ಪ್ರದಾನ ಕಾರ್ಯದರ್ಶಿಯಾಗಿ ರಾಘವೆಂದ್ರ ನಾಯಕ್ ಶಿರ್ವ, ಜೊತೆ ಕಾರ್ಯದರ್ಶಿ ಯಾಗಿ ಕಿರಣ ಆಳ್ವ ಕುತ್ಯಾರು, ಗ್ರಾಮೀಣ ಕಿಸಾನ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಯೋಗೀಶ್ ಶೆಟ್ಟಿ ಎಲ್ಲೂರು, ಪ್ರಕಾಶ್ ಶೆಟ್ಟಿ ಮಜೂರು, ರಾಧಕೃಷ್ಣ ಶಾಸ್ತ್ರಿ ಉಳಿಯಾರಗೋಳಿ, ರವಿ ಶೆಟ್ಟಿ ಪಡುಬಿದ್ರಿ, ಕೃಷ್ಣ ಪೂಜಾರಿ ಕುತ್ಯಾರು, ಸುದೇಶ್ ಭಂಡಾರಿ ಶಿರ್ವ, ವಿಜಯ ಶೆಟ್ಟಿ ಕಟಪಾಡಿ, ಎಡ್ವರ್ಡ್ ಮೆಂಡೊಸ್ ಬೆಳಪು, ಸುಧಾಕರ ಶೆಟ್ಟಿ ಉಚ್ಚಿಲ, ಸಂಜೀವ ಅಂಚನ್ ಕಾಪು, ಸುಧಾಕರ ಶೆಟ್ಟಿ ಇನ್ನಂಜೆ, ಮೊಂತು ಕ್ಯಾಸ್ಟಲಿನೊ ಬೆಳ್ಳೆ, ಸೋಮಯ್ಯ ಕಾಂಚನ್ ಕುರ್ಕಾಲು, ಜಾಕೀರ್ ಹುಸೇನ್ ಮಲ್ಲಾರ್, ಕೀರ್ತನ್ ರೋನಿ ಕುವೆಲ್ಲೊ ಪಲಿಮಾರು, ಶಿವರಾಮ್ ಶೆಟ್ಟಿ ಹೆಜಮಾಡಿ, ಲಕ್ಷ್ಮಣ್ ಪೂಜಾರಿ ಮಟ್ಟು, ಗ್ರಾಬ್ರಿಯಲ್ ಮಥಾಯಿಸ್ ಮುದರಂಗಡಿ, ಉದಯಕುಮಾರ್ ಎರ್ಮಾಳು ತೆಂಕ, ಐರಿನ್ ತಾವ್ರೊ ಕಳತ್ತೂರು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ನ್ಯಾಯವಾದಿ ಎಲ್ಲೂರು ಶಶಿಧರ ಶೆಟ್ಟಿ ಹಾಗೂ ಜಿಲ್ಲಾ ಕಾರ್ಯದರ್ಶಿ ಉದಯ್ ಹೆರೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.