×
Ad

ಹೋಟೆಲ್‌ಗಳು ಸೇವಾ ಶುಲ್ಕ ಪಾವತಿಸುವಂತೆ ಗ್ರಾಹಕರನ್ನು ಒತ್ತಾಯಿಸುವಂತಿಲ್ಲ: ಪಾಸ್ವಾನ್

Update: 2017-04-21 18:48 IST

 ಹೊಸದಿಲ್ಲಿ,ಎ.21: ಸೇವಾ ಶುಲ್ಕವನ್ನು ಪಾವತಿಸುವಂತೆ ಹೋಟೆಲ್‌ಗಳು ಗ್ರಾಹಕರನ್ನು ಒತ್ತಾಯಿಸುವಂತಿಲ್ಲ ಮತ್ತು ತಾವು ಪಡೆದ ಸೇವೆಗಾಗಿ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕೇ ಎನ್ನುವುದನ್ನು ನಿರ್ಧರಿಸುವ ಹಕ್ಕು ಗ್ರಾಹಕರಿಗಿದೆ ಎಂದು ಕೇಂದ್ರವು ರಾಜ್ಯ ಸರಕಾರಗಳಿಗಾಗಿ ರೂಪಿಸಿರುವ ಹೊಸ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದೆ.

ಸರಕಾರದ ಕ್ರಮವನ್ನು ಸರಣಿ ಟ್ವೀಟ್‌ಗಳಲ್ಲಿ ಪ್ರಕಟಿಸಿರುವ ಗ್ರಾಹಕ ವ್ಯವಹಾರಗಳ ಸಚಿವ ರಾಮ ವಿಲಾಸ್ ಪಾಸ್ವಾನ್ ಅವರು, ಈ ಮಾರ್ಗಸೂಚಿಗೆ ಪ್ರಧಾನಿ ಕಚೇರಿಯು ಒಪ್ಪಿಗೆ ನೀಡಿದೆ ಮತ್ತು ಅದನ್ನು ಜಾರಿಗೊಳಿಸಲು ರಾಜ್ಯ ಸರಕಾರಗಳಿಗೆ ಕಳುಹಿಸ ಲಾಗುತ್ತದೆ ಎಂದು ತಿಳಿಸಿದ್ದಾರೆ.

ಇದು ಕಳೆದ ಐದು ತಿಂಗಳ ಅವಧಿಲ್ಲಿ ರಾಜ್ಯ ಸರಕಾರಗಳಿಗೆ ಎರಡನೇ ಮಾರ್ಗಸೂಚಿಯಾಗಿದೆ. ಗ್ರಾಹಕರು ಸೇವಾಶುಲ್ಕವನ್ನು ನೀಡುವುದು ಕಡ್ಡಾಯವಲ್ಲ ಮತ್ತು ಅದು ಐಚ್ಛಿಕವಾಗಿದೆ ಎಂದು ಸೂಚಿಸುವ ಫಲಕಗಳು ಎಲ್ಲ ಹೋಟಲ್‌ಗಳು ಮತ್ತು ರೆಸ್ಟೋರಂಟ್‌ಗಳಲ್ಲಿ ಅಳವಡಿಕೆಯಾಗುವಂತೆ ನೋಡಿಕೊಳ್ಳುವಂತೆಯೂ ಕೇಂದ್ರವು ರಾಜ್ಯ ಸರಕಾರಗಳಿಗೆ ಸೂಚಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News