×
Ad

ತಾರಸಿ ಕೃಷಿಕ ಕೃಷ್ಣಪ್ಪ ಗೌಡರಿಗೆ ಆರ್ಯಭಟ ಪ್ರಶಸ್ತಿ

Update: 2017-04-21 19:00 IST

ಮಂಗಳೂರು,ಎ.21: ಬೆಂಗಳೂರಿನ ಸಾಂಸ್ಕೃತಿಕ ಸಂಸ್ಥೆಯು ನೀಡುವ 2016-17ನೆ ಸಾಲಿನ ಪ್ರತಿಷ್ಠಿತ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಗೆ ನಗರದ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾನಿಲಯದಲ್ಲಿ ಉದ್ಯೋಗದಲ್ಲಿರುವ ತಾರಸಿ ಕೃಷಿಕ ಪಡ್ಡಂಬೈಲ್ ಕೃಷ್ಣಪ್ಪಗೌಡ ಆಯ್ಕೆಯಾಗಿದ್ದಾರೆ. ಮೇ 24ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಅವರು ಪ್ರಶಸ್ತಿಯನ್ನು ಸ್ವೀಕರಿಸಲಿರುವರು.

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಪಡ್ಡಂಬೈಲ್ ಮನೆತನದ ಕೃಷ್ಣಪ್ಪಗೌಡರು 35 ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿದ್ದು, ದ.ಕ. ಜಿಪಂ ವಿವಿಧ ಇಲಾಖೆಗಳಲ್ಲಿ ವೃತ್ತಿನಿರತರಾಗಿದ್ದಾರೆ. ಇದೀಗ 16 ವರ್ಷಗಳಿಂದ ಮರೋಳಿಯ ತಮ್ಮ ಮನೆಯ ತಾರಸಿಯಲ್ಲಿ ಸಾವಯುವ ಕೃಷಿ ಮಾಡಿ ಜನಪ್ರಿಯರಾಗಿದ್ದಾರೆ. ತಾರಸಿ ತೋಟದ ಕೃಷ್ಣಪ್ಪರೆಂದೇ ಕರಸಿಕೊಳ್ಳುವ ಅವರ ಮನೆಯ ವಹಡಿಯಲ್ಲಿ ವಿವಿಧ ಬಗೆಯ ತರಕಾರಿ, ಹೂ-ಹಣ್ಣು, ಔಷಧಿ ಸಸ್ಯಗಳು ಹಾಗೂ ದವಸಧಾನ್ಯಗಳು ಬೆಳೆಯುತ್ತಿವೆ. ವಿಶೇಷವಾಗಿ ತಾರಸಿಯಲ್ಲಿ ಭತ್ತದ ನಾಟಿ ಮಾಡಿ ಪರಿಸರದವರಿಗೆ ತೆನೆ ಹಂಚಿದ ಹಿರಿಮೆ ಅವರದ್ದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News