×
Ad

ದೇರಳಕಟ್ಟೆ: ಸಮಸ್ತ ನೇತಾರರ ಸ್ವೀಕರಣಾ ಸಮಾರಂಭ

Update: 2017-04-21 19:02 IST

ಮಂಗಳೂರು, ಎ.21: ಸಮಸ್ತ ಎನ್ನುವುದು ಮಹಾನ್ ಧಾರ್ಮಿಕ ಗುರುಗಳ ನೇತೃತ್ವವಾಗಿದ್ದು, ಇಲ್ಲಿ ಕೈಗೊಳ್ಳುವ ತೀರ್ಮಾನ, ಶರೀಯತ್ ಎಂದಿಗೂ ಅಳಿಸಲಾಗದ್ದು ಎಂದು ಸಮಸ್ತ ಕೇರಳ ಜಂ-ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಸೈಯ್ಯದ್ ಮುಹಮ್ಮದ್ ಜಿಫ್ರಿ ುುತ್ತುಕೋಯ ತಂಙಳ್ ಹೇಳಿದರು.

ದೇರಳಕಟ್ಟೆ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ ಹಾಗೂ ಜಂ-ಇಯ್ಯತುಲ್ ಮುಅಲ್ಲಿಮೀನ್‌ನ ಜಂಟಿ ಆಶ್ರಯಲ್ಲಿ ದೇರಳಕಟ್ಟೆಯ ಬದ್ರಿಯಾ ಮಸೀದಿ ವಠಾರದಲ್ಲಿ ನಡೆದ ಸಮಸ್ತ ನೂತನ ನೇತಾರರ ಸ್ವೀಕರಣಾ ಸಮಾರಂಭದಲ್ಲಿ ಗೌರ ಸ್ವೀಕರಿಸಿ ಅವರು ಮಾತನಾಡಿದರು.

ಹಿರಿಯ ವಿದ್ವಾಂಸ ಇಬ್ರಾಹೀಂ ಬಾಖವಿ ಕೆ.ಸಿ.ರೋಡು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಿನ್ಯ ದಾರುಸ್ಸಲಾಂ ಸಂಶುಲ್ ಉಲಮಾ ಅಕಾಡಮಿ ಅಧ್ಯಕ್ಷ ಸೈಯದ್ ಅಮೀರ್ ತಂಙಳ್ ನೇತೃತ್ವದಲ್ಲಿ ತಹ್‌ಲೀಲ್ ಸಮರ್ಪಣೆ ನಡೆಯಿತು. ದೇರಳಕಟ್ಟೆ ಬದ್ರಿಯಾ ಜುಮಾ ಮಸೀದಿಯ ಖತೀಬ್ ಅಶ್ರಫ್ ರಹಾ್ಮನಿ ಚೌಕ ಮುಖ್ಯ ಭಾಷಣ ಮಾಡಿದರು.

ಉಳ್ಳಾಲ ಮೆಲಂಗಡಿ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಫಾರೂಕ್ ಉಳ್ಳಾಲ್, ಜಿಲ್ಲಾ ಮದ್ರಸ ಮ್ಯಾನೇಜ್‌ಮೆಂಟ್ ಕೋಶಾದಿಕಾರಿ ಮೆಟ್ರೋ ಶಾಹುಲ್ ಹಮೀದ್, ದೇರಳಕಟ್ಟೆ ಮಸೀದಿಯ ಅಧ್ಯಕ್ಷ ಅಬೂಬಕರ್ ನಾಟೆಕಲ್, ಮಾಜಿ ಅಧ್ಯಕ್ಷ ಇಸ್ಮಾಯೀಲ್ ದೇರಳಕಟ್ಟೆ, ಕೋಶಾಧಿಕಾರಿ ಅಬ್ದುಲ್ ರಹ್ಮಾನ್ ಪನೀರ್, ದೇರಳಕಟ್ಟೆ ಜಂ-ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುಲ್ಲತೀಫ್ ದಾರಿಮಿ ರೆಂಜಾಡಿ, ಪ್ರಧಾನ ಕಾರ್ಯದರ್ಶಿ ಫಾರೂಕ್ ದಾರಿಮಿ, ಸ್ವಾಗತ ಸಮಿತಿಯ ಅಧ್ಯಕ್ಷ ಇಸಾಕ್ ನಾಟೆಕಲ್, ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ಗೌರವಾಧ್ಯಕ್ಷ ಅಬ್ಬಾಸ್, ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಘಟಕಾಧ್ಯಕ್ಷ ಸೈಯ್ಯದಾಲಿ ಉಪಸ್ಥಿತರಿದ್ದರು. ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಕೊಣಾಜೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News