ಉದ್ಯಾವರ ಅರಸು ದೈವಗಳ ಸಾವಿರ ಜಮಾಅತ್ ಭೇಟಿ
Update: 2017-04-21 19:20 IST
ಮಂಜೇಶ್ವರ,ಎ.21 : ಉದ್ಯಾವರ ಅರಸು ದೈವಗಳ ವರ್ಷಾವಧಿ ಉತ್ಸವದ ಅಂಗವಾಗಿ ನಡೆಯುವ ಸಾವಿರ ಜಮಾಅತ್ ಭೇಟಿಯು ಶುಕ್ರವಾರ ನಡೆಯಿತು. ಉದ್ಯಾವರ ಮಾಡ ಅರಸು ಮಂಜೀಷ್ಣಾರ್ ಉತ್ಸವದ ಸಲುವಾಗಿ ಕಳೆದ 800 ವರ್ಷಗಳಿಂದ ಉದ್ಯಾವರ ಸಾವಿರ ಜಮಾಅತ್ ಗೆ ಅರಸು ದೈವಗಳು ಭೇಟಿ ನೀಡುವುದು ವಾಡಿಕೆಯಾಗಿದೆ. ಇದರಂತೆ ಚೆಂಡೆ ವಾಧ್ಯಗಳೊಂದಿಗೆ ಅರಸು ದೈವಗಳು , ಅರಸು ಕ್ಷೇತ್ರ ಸಮಿತಿ ಪದಾಧಿಕಾರಿಗಳು ಶುಕ್ರವಾರ ಜುಮಾ ನಮಾಝ್ ಮುಗಿಯುತ್ತಿದ್ದಂತೆ ಸಾವಿರ ಜಮಾಅತ್ ಗೆ ಭೇಟಿ ನೀಡಿದರು. ಇವರನ್ನು ಜಮಾಅತ್ ಪ್ರತಿನಿಧಿಗಳು ಸ್ವಾಗತಿಸಿದರು. ಉದ್ಯಾವರ ಮಾಡ ಅರಸು ಮಂಜೀಷ್ಣಾರ್ ಕ್ಷೇತ್ರದ ಉತ್ಸವವು ಮೇ 8 ರಿಂದ 11 ರ ತನಕ ನಡೆಯಲಿದೆ. ಇಲ್ಲಿನ ಉತ್ಸವದಲ್ಲಿ ಮುಸ್ಲಿಂ ಭಾಂದವರು ಭಾಗವಹಿಸುತ್ತಿದ್ದು ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿ ಎನ್ನಬಹುದು.