ಕೊಣಾಜೆ: ಸಾಧಕರಿಗೆ ಸನ್ಮಾನ ಕಾರ್ಯಕ್ರಮ
ಕೊಣಾಜೆ,ಎ.21: ಕೊಣಾಜೆ ಗ್ರಾಮದ ಶ್ರೀ ಕ್ಷೇತ್ರ ಬ್ರಹ್ಮಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸೋಮೇಶ್ವರ ಸೋಮನಾಥ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ, ಸುಬ್ರಾಯ ಭಟ್ ಅಂಡಾಲ, ಪಾತ್ರಿ ಶ್ರೀರಾಮ ತಂಜರೆ, ಕೃಷಿ ಉತ್ಪನ್ನ ಮಾರುಕಟ್ಟೆಯ ಉಪಾಧ್ಯಕ್ಷ ಮುತ್ತು ಶೆಟ್ಟಿ, ತಾಲೂಕು ಪಂಚಾಯಿತಿ ಸದಸ್ಯೆ ಪದ್ಮಾವತಿ ಪೂಜಾರಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಗ್ರಾಮ ಪಂಚಾಯಿತಿ ಸದಸ್ಯೆ ವೇದಾವತಿ ಗಟ್ಟಿ ಅವರನ್ನು ಕ್ಷೇತ್ರದ ಪರವಾಗಿ ಹಾಗೂ ಶ್ರೀ ನಾಗಬ್ರಹ್ಮ ಸ್ವಸಹಾಯ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಕೊಣಾಜೆ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಅಚ್ಯುತ ಗಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಹರೇಕಳ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರವೀಂದ್ರ ರೈ ಹರೇಕಳ, ನಾಟಿ ವೈದ್ಯರಾದ ಶಂಕರಾನಂದ ಇನ್ನವಳ್ಳಿ, ದೇವಸ್ಥಾನದ ಆಡಳಿತ ಸಮಿತಿಯ ರಘುರಾಮ ಗಟ್ಟಿ, ಸೀತಾರಾಮ ಶೆಟ್ಟಿ ಕೆಳಗಿನ ಮನೆ, ಮಹಾಬಲ ಗಟ್ಟಿ ಕೆಳಗಿನ ಮನೆ, ದಯಾನಂದ ಗಟ್ಟಿ ಕೆಳಗಿನ ಮನೆ, ಶ್ರೀದರ ಪುಳಿಂಚಾಡಿ, ರಾಮಚಂದ್ರ ಎಂ ಕೊಣಾಜೆ, ಜಗದೀಶ್ ಭಟ್ ಅಂಡಾಲ ಮೊದಲಾದವರು ಉಪಸ್ಥಿತರಿದ್ದರು.