ಫ್ರಾನ್ಸ್ ದಾಳಿ: ಓರ್ವ ಪೊಲೀಸ್ ಸಾವು

Update: 2017-04-21 14:50 GMT

ಪ್ಯಾರಿಸ್, ಎ. 21: ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನ ಪ್ರತಿಷ್ಠಿತ ‘ಚಾಂಪ್ಸ್ ಎಲೈಸೀಸ್’ ರಸ್ತೆಯಲ್ಲಿ ಬಂದೂಕುಧಾರಿಯೊಬ್ಬ ಪೊಲೀಸ್ ತಂಡವೊಂದರ ಮೇಲೆ ಗುರುವಾರ ರಾತ್ರಿ ನಡೆಸಿದ ದಾಳಿಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದಾರೆ ಹಾಗೂ ಮೂವರು ಗಾಯಗೊಂಡಿದ್ದಾರೆ.

ಬಳಿಕ ಬಂದೂಕುಧಾರಿಯನ್ನು ಪೊಲೀಸರು ಗುಂಡಿಟ್ಟು ಕೊಂದರು.ರವಿವಾರ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಕೇವಲ ಮೂರು ದಿನಗಳು ಬಾಕಿಯಿರುವಂತೆಯೇ ಈ ದಾಳಿ ನಡೆದಿದೆ.ದಾಳಿಯ ಹೊಣೆಯನ್ನು ಐಸಿಸ್ ಭಯೋತ್ಪಾದಕ ಗುಂಪು ಹೊತ್ತುಕೊಂಡಿದೆ.

ಭದ್ರತೆ ಈಗಾಗಲೇ ಪ್ರಮುಖ ಚುನಾವಣಾ ವಿಷಯವಾಗಿದ್ದು, ನೂತನ ದಾಳಿಯು ಮತದಾರರ ತೀರ್ಮಾನದ ಮೇಲೆ ಹೆಚ್ಚಿನ ಪರಿಣಾಮ ಬೀರಬಹುದೆಂದು ಹೇಳಲಾಗಿದೆ.ಫ್ರಾನ್ಸ್‌ನಲ್ಲಿ ರವಿವಾರ ಮೊದಲ ಸುತ್ತಿನ ಮತದಾನ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News