ನೆತ್ತಿಲಪದವು: 15ರ ಹರೆಯದ ಬಾಲಕಿ ಆತ್ಮಹತ್ಯೆ
Update: 2017-04-21 20:30 IST
ಕೊಣಾಜೆ,ಎ.21: ಕೊಣಾಜೆ ಠಾಣಾ ವ್ಯಾಪ್ತಿಯ ನರಿಂಗಾನ ಗ್ರಾಮದ ನೆತ್ತಿಲಪದವು ಎಂಬಲ್ಲಿ 15 ಹರೆಯದ ಬಾಲಕಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಶುಕ್ರವಾರ ನಡೆದಿದೆ.
ನೆತ್ತಿಲ ಪದವಿನ ಯೂಸೂಫ್ ಎಂಬವರ ಪುತ್ರಿ ಶೈನಾ(15) ಎಂಬಾಕೆಯೇ ಆತ್ಮಹತ್ಯೆಗೈದ ಬಾಲಕಿಯಾಗಿದ್ದಾಳೆ. ಈಕೆ ಮನೆಯ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಈಕೆಯ ತಂದೆ ಯೂಸುಫ್‌ಗೆ ಎರಡನೇ ಮದುವೆಯಾಗಿದ್ದು ಆತ್ಮಹತ್ಯೆಗೈದವಳು ಎರಡನೇ ಪತ್ನಿಯ ಮಗಳಾಗಿದ್ದಾಳೆ. ಯೂಸುಫ್‌ನ ಎರಡನೇ ಪತ್ನಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.