×
Ad

ಸಮುದಾಯದ ಸಮಸ್ಯೆಗಳಲ್ಲಿ ಉಲಮಾಗಳ ಪಾತ್ರ ಮಹತ್ವದ್ದು: ಫಾರೂಕ್

Update: 2017-04-21 20:34 IST

ಬಂಟ್ವಾಳ, ಎ. 21: ಪ್ರಸ್ತುತ ಮುಸ್ಲಿಮ್ ಸಮುದಾಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಉಲೆಮಾಗಳ ಪಾತ್ರ ಮಹತ್ತರವಾಗಿದೆ ಎಂದು ಜೆಡಿಎಸ್ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಫಾರೂಕ್ ಹೇಳಿದರು.

ಬಂಟ್ವಾಳ ಕೆಳಗಿನಪೇಟೆ ಹಝ್ರತ್ ಮಸ್ಸಾನ್ ಕೋಯ ಉರೂಸು ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಮುಸ್ಲಿಮ್ ಸಮುದಾಯ ಇಂದು ಎಲ್ಲ ಕ್ಷೇತ್ರದಲ್ಲೂ ಹಿಂದುಳಿದಿದೆ. ಮುಸ್ಲಿಮ್ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಳು ಹಾಗೂ ಸಮುದಾಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಉಲೆಮಾಗಳ ಪಾತ್ರ ಮಹತ್ವರವಾಗಿದೆ. ಈ ದಿಸೆಯಲ್ಲು ಉಲೆಮಾಗಳು ಕಾರ್ಯಪ್ರವೃತ್ತರಾಗಬೇಕು ಎಂದು ಅವರು ಹೇಳಿದರು.

ಉರೂಸ್ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಸಮುದಾಯದ ಏಳಿಗೆಗೆ ಪೂರಕವಾಗಿ ನಡೆಯಬೇಕು ಎಂದು ಅವರು, ಸಮುದಾಯದ ಯುವ ಜನರು ಉನ್ನತ ವಿದ್ಯಾಭ್ಯಾಸಗಳನ್ನು ಪಡೆಯುವ ಮೂಲಕ ಸಾರ್ವಜನಿಕ ಸೇವೆಗಳಲ್ಲಿ ಮುಂದುವರಿಯಬೇಕು ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಹ್ಮದ್ ತ್ವಾಕಾ ಮುಸ್ಲಿಯಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಸೈಯದ್ ಫಲುಲ್ ಪೂಕೋಯಾ ತಂಙಳ್ ದುಅ ಆಶೀರ್ವಚನ ನೀಡಿದರು. ಸಚಿವ ಬಿ.ರಮಾನಾಥ ರೈ, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಜಮಾಅತ್ ಕಮಿಟಿ ಅಧ್ಯಕ್ಷ ಇಸ್ಮಾಯೀಲ್ ಅರಬಿ, ಸದಸ್ಯ ಖಾದರ್ ಮಾಸ್ಟರ್, ಜೆಡಿಎಸ್ ಮುಖಂಡರಾದ ಹಾರೂನ್ ರಶೀದ್ ಸಹಿತ ಮೊದಲಾದವರು ಉಪಸ್ಥಿತರಿದ್ದರು. ಬಂಟ್ವಾಳ ಜುಮಾ ಮಸೀದಿ ಮುದರ್ರಿಸ್ ಅನ್ಸಾರ್ ಫೈಝಿ ಅಲ್ ಬುರ್ಹಾನಿ ಸ್ವಾಗತಿಸಿದರು. ತೌಹೀದ್ ಸದರ್ ಮುಹಲ್ಲಿಂ ಸಿದ್ದೀಕ್ ರಹ್ಮಾನಿ ದನ್ಯವಾದಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News