×
Ad

ಶಿಸ್ತುಬದ್ಧ ಜೀವನವನ್ನು ಅಳವಡಿಸಿಕೊಳ್ಳಲು ಬಾಯಾರ್ ತಂಙಳ್ ಕರೆ

Update: 2017-04-21 21:10 IST

ಪಡುಬಿದ್ರಿ,ಎ.21: ಇಸ್ಲಾಂ ಧರ್ಮ ಪವಿತ್ರ ಹಾಗೂ ಶಿಸ್ತುಬದ್ಧವಾದ ಜೀವನವನ್ನು ತಮ್ಮ ದಿನನಿತ್ಯ ಜೀವನದಲ್ಲಿ ಪಾಲಿಸಲು ಮಾನವಕುಲಕ್ಕೆ ತಿಳಿಸಿದೆ. ಪ್ರವಾದಿಯವರ ಆದರ್ಶವನ್ನು ಮೈಗೂಡಿಸಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಬಹು ಸಯ್ಯದ್ ಅಬ್ದುಲ್ ರಹಿಮಾನ್ ಇಂಬಿಚ್ಚಿಕೋಯ ತಂಙಳ್ ಬಾಯಾರ್ ಹೇಳಿದರು.

ಅವರು ಗುರುವಾರ ಕಣ್ಣಂಗಾರ್ ಶೇಖ್ ಸಿರಾಜುದ್ದೀನ್ ದರ್ಗಾ ಶರೀಫ್ ಹೆಸರಿನಲ್ಲಿ ಮೂರು ವರುಷಗಳಿಗೊಮ್ಮೆ ನಡೆಯುವ ಇತಿಹಾಸ ಪ್ರಸಿದ್ಧ ಕಣ್ಣಂಗಾರ್ ಉರೂಸ್ ಸಮಾರಂಭದ ಧಾರ್ಮಿಕ ಮತಪ್ರವಚನದಲ್ಲಿ ಮಾತನಾಡಿದರು.

 ಮುಹಮ್ಮದ್ ನೌಫಲ್ ಕಳಸ ಮುಖ್ಯಭಾಷಣ ಮಾಡಿದರು. ಜುಮ್ಮ ಮಸೀದಿ ಮುದರ್ರಿಸ್ ಅಶ್ರಫ್ ಸಖಾಫಿ ಕಿನ್ಯ, ಉರೂಸ್ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಯು.ಕೆ, ಜುಮ್ಮಾ ಮಸೀದಿ ಅಧ್ಯಕ್ಷ ಎಚ್.ಬಿ.ಮುಹಮ್ಮದ್, ಹನೀಫ್ ಕಣ್ಣಂಗಾರ್ ಮತ್ತಿತರರು ಉಪಸ್ಥಿತರಿದ್ದರು.

ಸಮಾರೋಪ: ಕಣ್ಣಂಗಾರ್ ಜುಮ್ಮಾ ಮಸೀದಿ ಮುಂಭಾಗದಲ್ಲಿರುವ ಶೇಖ್ ಸಿರಾಜುದ್ದೀನ್ ದರ್ಗಾ ಶರೀಫ್ ಹೆಸರಿನಲ್ಲಿ ಮೂರು ವರುಷಗಳಿಗೊಮ್ಮೆ ನಡೆಯುವ ಇತಿಹಾಸ ಪ್ರಸಿದ್ಧ ಕಣ್ಣಂಗಾರ್ ಉರೂಸ್ ಎಪ್ರಿಲ್ 22ರಂದು ಸಮಾರೋಪಗೊಳ್ಳಲಿದೆ.

ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಉರೂಸ್ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಯು.ಕೆ. ಅಧ್ಯಕ್ಷತೆ ವಹಿಸಲಿದ್ದಾರೆ. ಸಂಯುಕ್ತ ಖಾಝಿ ಪಿ.ಎಮ್.ಇಬ್ರಾಹಿಮ್ ಮುಸ್ಲಿಯಾರ್ ಬೇಕಲ್ ಉದ್ಘಾಟಿಸಲಿದ್ದಾರೆ. ಮರ್ಕಝುಲ್ ಹುದಾ ಕುಂಬ್ರ ಪ್ರಧಾನ ಕಾರ್ಯದರ್ಶಿಎಮ್.ಎಸ್.ಎಮ್.ಅಬ್ದುರ್ರಶೀದ್ ಸಖಾಫಿ ಝೈನಿ ಕಾಮಿಲ್ ಮುಖ್ಯಪ್ರಭಾಷಣ ಮಾಡಲಿದ್ದಾರೆ. ಸಯ್ಯದ್ ಇಬ್ರಾಹಿಂ ಖಲೀಲ್ ತಂಙಳ್, ಅಲ್‌ಬುಖಾರಿ ಕಡಲುಂಡಿ ದುವಾ ನೆರವೇರಿಸಲಿದ್ದಾರೆ. ಝೈನುಲ್ ಉಲಮಾ ಎಂ.ಅಬ್ದುಲ್ ಹಮೀದ್ ಮುಸ್ಲಯಾರ್ ಮಾಣಿ, ಡಾ.ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ, ಅಶ್ರಫ್ ಸಖಾಫಿ ಕಿನ್ಯ, ಸಚಿವರಾದ ತನ್ವೀರ್ ಸೇಠ್, ಯು.ಟಿ.ಖಾದರ್, ಪ್ರಮೋದ್ ಮಧ್ವರಾಜ್, ಶಾಸಕರಾದ ವಿನಯಕುಮಾರ್ ಸೊರಕೆ, ಬಿ.ಎಂ.ಮೊಯಿದಿನ್ ಬಾವ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಮುಹಮ್ಮದ್ ಸಾಧಿಕ್ ಫಾಳಿಲ್ ನೇತೃತ್ವದಲ್ಲಿ ಬುರ್ಧಾ ಮಜ್ಲಿಸ್ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News