ಅಫ್ಘಾನ್ ಸೇನಾ ಶಿಬಿರದ ಮೇಲೆ ದಾಳಿ : 10 ಸಾವು

Update: 2017-04-21 15:58 GMT

ಕಾಬೂಲ್, ಎ. 21: ಮಝಾರೆ ಶರೀಫ್ ನಗರದಲ್ಲಿರುವ ಅಫ್ಘಾನ್ ನ್ಯಾಶನಲ್ ಆರ್ಮಿ ಕಾರ್ಪ್ಸ್ ಪ್ರಧಾನಕಚೇರಿಯ ಶುಕ್ರವಾರ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ ಎಂದು ಅಫ್ಘಾನ್ ಮಾಧ್ಯಮ ವರದಿಗಳು ತಿಳಿಸಿವೆ.

ಉತ್ತರದ ಬಲ್ಖ್ ಪ್ರಾಂತದ ರಾಜಧಾನಿಯಲ್ಲಿರುವ 209ನೆ ಶಹೀನ್ ಕಾರ್ಪ್ಸ್‌ನ ಪ್ರಧಾನಕಚೇರಿಯ ಪರಿಸರದಲ್ಲಿ ಭಾರೀ ಗುಂಡಿನ ದಾಳಿ ಮತ್ತು ಸ್ಫೋಟಗಳ ಸದ್ದು ಕೇಳಿ ಬಂದಿದೆ.

ಭದ್ರತಾ ಪಡೆಗಳಿಗೆ ಸೇರಿದ ಎರಡು ವಾಹನಗಳಲ್ಲಿದ್ದ ಭಯೋತ್ಪಾದಕರು, ಹಲವು ಹಂತಗಳ ಭದ್ರತಾ ಕವಚಗಳನ್ನು ನಿವಾರಿಸಿ ಒಳಹೋಗುವಲ್ಲಿ ಯಶಸ್ವಿಯಾದರು ಎಂದು ವರದಿಗಳು ಹೇಳಿವೆ.

ದಾಳಿಯು ಮಧ್ಯಾಹ್ನ ಸುಮಾರು 1:30ಕ್ಕೆ ಆರಂಭವಾಗಿದ್ದು, ಮಸೀದಿಯೊಂದರಲ್ಲಿ ಶುಕ್ರವಾರದ ಪ್ರಾರ್ಥನೆಯಲ್ಲಿ ನಿರತರಾಗಿದ್ದ ಸೈನಿಕರು ಮತ್ತು ಅಧಿಕಾರಿಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News