ಮನೆಯಿಂದ ಕಳವು
Update: 2017-04-21 22:35 IST
ಮಂಗಳೂರು, ಎ. 21: ಸುರತ್ಕಲ್‌ನ ತಡಂಬೈಲ್‌ನಲ್ಲಿ ಮನೆಯಿಂದ 95 ಸಾವಿರ ರೂ. ಮೌಲ್ಯದ ಸೊತ್ತು ಕಳವಾದ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುರುವಾರ ರಾತ್ರಿ ಮನೆಗೆ ನುಗ್ಗಿದ ಕಳ್ಳರು ಬೆಡ್ ರೂಂನಲ್ಲಿದ್ದ 8 ಗ್ರಾಂ ಬಂಗಾರದ ಬಳೆ, 2 ಗ್ರಾಂ ಚಿನ್ನದ ಉಂಗುರ, 3.20 ಗ್ರಾಂ ಬಳೆ, 8 ಗ್ರಾಂ ಹವಳದ ಪೆಂಡೆಂಟ್, 3 ಗ್ರಾಂ ಬಿಳಿ ಹವಳಿನ ಉಂಗುರ, ಇನ್ನೆರಡು ಉಂಗುರ ಸೇರಿ ಒಟ್ಟು 47 ಗ್ರಾಂ ತೂಕದ ಸೊತುತಿಗಳು ಕಳವಾಗಿರುವುದಾಗಿ ಮಾಲೀಕ ರಾಜೇಶ್ ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದಾರೆ.