ಸುಳ್ಯ ದಫ್ ಸ್ಪರ್ಧೆ : ಪರ್ಲಡ್ಕ ತಂಡಕ್ಕೆ ಪ್ರಶಸ್ತಿ
ಸುಳ್ಯ,ಎ.21 : ಇಲ್ಲಿನ ಗಾಂಧಿನಗರದ ಅಲ್-ಮದೀನಾ ಯಂಗ್‌ಮೆನ್ಸ್ ಹಾಗೂ ದ.ಕ. ಮತ್ತು ಉಡುಪಿ ಜಿಲ್ಲಾ ದಫ್ ಎಸೋಸಿಯೇಶನ್ ಇವುಗಳ ಜಂಟಿ ಆಶ್ರಯದಲ್ಲಿ ನಡೆದ ದಫ್ ಸ್ಪರ್ಧಾ ಕಾರ್ಯಕ್ರಮದಲ್ಲಿ ಪುತ್ತೂರು-ಪರ್ಲಡ್ಕದ ಹಯಾತುಲ್ ಇಸ್ಲಾಂ ದಫ್ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು. ಬಿ.ಸಿ.ರೋಡು-ಮಿತ್ತಬೈಲಿನ ಶಂಸುಲ್ ಉಲಮಾ ದಫ್ ತಂಡ ದ್ವಿತೀಯ, ಮಂಗಳೂರು-ಬೋಂದೆಲ್‌ನ ಸಿ.ಎಂ. ದಫ್ ತಂಡ ತೃತೀಯ ಹಾಗೂ ಕಾಪು-ಮಜೂರು ಸಿರಾಜುಲ್ ಹುದಾ ದಫ್ ತಂಡ ಚತುರ್ಥ ಸ್ಥಾನವನ್ನು ಪಡೆದುಕೊಂಡಿತು.
ಸುಳ್ಯ ನಗರ ಪಂಚಾಯತ್ ಸದಸ್ಯರಾದ ಹಾಜಿ ಮುಸ್ತಫಾ ಉದ್ಘಾಟಿಸಿದರು. ಸುಳ್ಯ ಎಪಿಎಂಸಿ ನಿರ್ದೇಶಕ ಹಾಜಿ ಎಸ್. ಆದಂ ಕುಂಞಿ ಕಮ್ಮಾಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ವೆಂಕಪ್ಪ ಗೌಡ, ದ.ಕ. ಮತ್ತು ಉಡುಪಿ ಜಿಲ್ಲಾ ದಫ್ ಎಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಲತೀಫ್ ನೇರಳಕಟ್ಟೆ, ಸುಳ್ಯ ನಗರ ಪಂಚಾಯತ್ ಸದಸ್ಯ ಕೆ.ಎಸ್. ಉಮ್ಮರ್, ಪೂರ್ವಾಧ್ಯಕ್ಷ ಎಸ್. ಸಂಶುದ್ದೀನ್, ಜಮೀಯ್ಯತುಲ್ ಫಲಾಹ್ ಸುಳ್ಯ ಘಟಕಾಧ್ಯಕ್ಷ ಅಬ್ಬಾಸ್ ಹಾಜಿ ಕಟ್ಟೆಕ್ಕಾರ್, ಸುಳ್ಯ ಅನ್ಸಾರಿಯಾ ಯತೀಂ ಖಾನಾ ಅಧ್ಯಕ್ಷ ಹಾಜಿ ಕೆ.ಎಂ. ಮಜೀದ್ ಜನತಾ, ಉದ್ಯಮಿ ಸಂಶುದ್ದೀನ್ ಸಿಕೆವೈ ಪಳ್ಳಂಗೋಡು, ಸುಳ್ಯ ಅಲ್ಪಸಂಖ್ಯಾತ ಸಹಕಾರಿ ಸಂಘದ ಅಧ್ಯಕ್ಷ ಜಿ.ಎಂ. ಮುಹಮ್ಮದ್ ಆರ್.ಕೆ., ನ್ಯಾಯವಾದಿಗಳಾದ ನೂರುದ್ದೀನ್ ಸಾಲ್ಮರ, ಮೂಸಾ ಪೈಂಬಚ್ಚಾಲ್, ಬೆಳ್ಳಾರೆ ಗ್ರಾ.ಪಂ. ಸದಸ್ಯ ಮುಹಮ್ಮದ್ ಆರಿಫ್ ಇಂಜಿನಿಯರ್, ದಫ್ ಎಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಪಿ.ಎಂ. ಅಶ್ರಫ್ ಪಾಣೆಮಂಗಳೂರು, ಸುಳ್ಯ ದುಲ್‌ಪುಕಾರ್ ದಫ್ ಸಂಘದ ಅಧ್ಯಕ್ಷ ಸತ್ತಾರ್ ಸಂಗಂ, ಜಟ್ಟಿಪಳ್ಳ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಶೀದ್ ಜಟ್ಟಿಪಳ್ಳ, ಸುಳ್ಯ ಅನ್ಸಾರಿಯಾ ಯತೀಂ ಖಾನಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪರ್ಲಡ್ಕ, ಉದ್ಯಮಿಗಳಾದ ಅಥಾವುಲ್ಲಾ ಕೆ.ಎಂ. ಸುಳ್ಯ, ಸೈಫುದ್ದೀನ್ ಅಟ್ಲಾಸ್ ಗೋಲ್ಡ್ ಸುಳ್ಯ, ಜಬ್ಬಾರ್ ಸುಳ್ಯ, ಅಬ್ದುಲ್ ರಝಾಕ್ ಕರಾವಳಿ (ಪುತ್ತುಚ್ಚ) ಮೊದಲಾದವರು ಭಾಗವಹಿಸಿದ್ದರು. ಇದೇ ವೇಳೆ ಆರಂತೋಡು ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ. ಶಹೀದ್, ಹಿರಿಯ ಸಮಾಜ ಸೇವಕ ಹಾಜಿ ಇಬ್ರಾಹಿಂ ಸೀ ಫುಡ್, ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ, ಸಂಟ್ಯಾರ್ ಚಾರಿಟೇಬಲ್ ಟ್ರಸ್ಟ್ ಚಯರ್‌ಮೆನ್ ಅಶ್ರಫ್ ಬಾಲೆಂಬಿ ಅವರನ್ನು ಸನ್ಮಾನಿಸಲಾಯಿತು.
ಅಲ್-ಮದೀನಾ ಯಂಗ್‌ಮೆನ್ಸ್ ಅಧ್ಯಕ್ಷ ಬಶೀರ್ ಕೆ.ಎಂ., ಪದಾಧಿಕಾರಿಗಳಾದ ಹನೀಫ್, ಸಿದ್ದೀಕ್ ನಾವೂರು, ಶರೀಫ್ ಕಂಠಿ, ಮನ್ಸೂರ್ ಮೆಟ್ರೋ ಪ್ಯಾಲೇಸ್, ಮುನಾಫರ್ ನಾವೂರು, ಇಕ್ಬಾಲ್ ಜೈಭಾರತ್ ಮೊದಲಾದವರು ಉಪಸ್ಥಿತರಿದ್ದರು.
ಸುಳ್ಯ ನಗರ ಪಂಚಾಯತ್ ಆಶ್ರಯ ಸಮಿತಿ ಸದಸ್ಯ ಕೆ.ಬಿ. ಅಬ್ದುಲ್ ಮಜೀದ್ ಸ್ವಾಗತಿಸಿ, ಮುಹಮ್ಮದ್ ಸವಾದ್ ಗಾಂಧಿನಗರ ವಂದಿಸಿದರು. ದಫ್ ಎಸೋಸಿಯೇಶನ್ ಸದಸ್ಯ ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.