ಬೈಕಂಪಾಡಿ: ಅಡ್ಕಾ ಉರೂಸ್ ಸಮಾರೋಪ

Update: 2017-04-21 17:30 GMT

ಮಂಗಳೂರು, ಎ. 21: ಬೈಕಂಪಾಡಿ ಸಮೀಪದ ಅಡ್ಕ ಹಝ್ರತ್ ಶೇಖ್ ಮಹ್ಮೂದ್ ವಲಿಯುಲ್ಲಾಹ್ ಉರೂಸ್ ಮತ್ತು ನವೀಕೃತ ಗೌಸಿಯಾ ಮಸೀದಿ ಹಾಗೂ ದರ್ಗಾ ಕಟ್ಟಡ ಉದ್ಘಾಟನಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಶುಕ್ರವಾರ ನಡೆಯಿತು.

 ಬೈಕಂಪಾಡಿ ಜುಮಾ ಮಸೀದಿ ಸಮಿತಿಯ ಅಧ್ಯಕ್ಷ ಅಬ್ದುನ್ನಾಸಿರ್ ಲಕ್ಕಿಸ್ಟಾರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಬಿ.ಎ.ಮೊಯ್ದಿನ್ ಬಾವ, ಮಸೀದಿ ಸಮಿತಿಯ ಉಪಾಧ್ಯಕ್ಷ ಚೈಬಾವ, ಖತೀಬ್ ಹೈದರಾಲಿ ಸಖಾಫಿ, ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ಮಂಗಳೂರು ಮಹಾ ನಗರ ಪಾಲಿಕೆಯ ಉಪಮೇಯರ್ ರಜನೀಶ್, ಕಾರ್ಪೊರೇಟರ್‌ಗಳಾದ ಪುರುಷೋತ್ತಮ ಚಿತ್ರಾಪುರ, ಅಬ್ದುಲ್ಲತೀಫ್ ಕಂದಕ್, ವಾರ್ತಾಧಿಕಾರಿ ಬಿ.ಎ.ಖಾದರ್ ಶಾ,  ಬ್ಯಾರಿ ಅಕಾಡಮಿಯ ಅಧ್ಯಕ್ಷ ಹನೀಫ್, ಮಂಗಳೂರು ತಾ.ಪಂ. ಸದಸ್ಯ ಬಶೀರ್ ಅಹ್ಮದ್ ಜೋಕಟ್ಟೆ, ಮನಪಾ ಸುರತ್ಕಲ್ ವಿಭಾಗದ ಸಹಾಯಕ ಅಭಿಯಂತರರಾದ ಅಬ್ದುಲ್ ಖಾದರ್, ದೇವರಾಜ್, ಡೆಕ್ಕನ್ ಪ್ಯಾಕೇಜಿಂಗ್ ಇಂಡಿಯಾ ಪ್ರೈ.ಲಿ.ನ ಮಾಲಕ ಹಾಜಿ ಅಸ್ಗರ್ ಅಲಿ, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಬಶೀರ್ ಬೈಕಂಪಾಡಿ, ಚೈ ಬಾವ, ಹೈದರಾಲಿ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು.

ಅಡ್ಕಾ ಸಭಾಂಗಣದ ವಿಸ್ತೃತ ಉಪಹಾರ ಗೃಹವನ್ನು ಸಚವ ಯು.ಟಿ.ಖಾದರ್, ಪ್ರವಾಸೋದ್ಯಮ ಇಲಾಖೆ ಅನುದಾನದಿಂದ ನಿರ್ಮಿಸಲ್ಪಟ್ಟಿರುವ ಯಾತ್ರಿ ನಿವಾಸ ಕಟ್ಟಡದ ಶಂಕುಸ್ಥಾಪನೆಯನ್ನು ಶಾಸಕ ಬಿ.ಎ.ಶಾಸಕ ಬಿ.ಎ.ಮೊದಿನ್ ಬಾವ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಸಕ ಬಾವರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News