ಬಿಸಿಸಿಐಯಿಂದ ಮುಖ್ಯಮಂತ್ರಿ ಭೇಟಿ
Update: 2017-04-21 23:27 IST
ಮಂಗಳೂರು, ಎ.21: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ(ಬಿಸಿಸಿಐ)ನ ನಿಯೋಗವೊಂದು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿತು.
ಬ್ಯಾರಿ ಸಮುದಾಯದ ಉದ್ಯಮಿಗಳಿಗೆ ಹಾಗೂ ವ್ಯಾಪಾರಿಗಳಿಗೆ ಸರಕಾರದ ವತಿಯಿಂದ ಪ್ರೋತ್ಸಾಹ, ಸಹಕಾರ ಬೆಂಬಲ ನೀಡುವಂತೆ ನಿಯೋಗವು ಈ ವೇಳೆ ಮನವಿ ಮಾಡಿತು.
ನಿಯೋಗದಲ್ಲಿ ಆಹಾರ ಸಚಿವ ಯು.ಟಿ.ಖಾದರ್, ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್, ಉದ್ಯಮಿಗಳಾದ ಅಬ್ದುರ್ರವೂಫ್ ಪುತ್ತಿಗೆ, ನಿಸಾರ್ ಮುಹಮ್ಮದ್, ರಿಯಾಝ್ ಬಾವ, ಅಸ್ಗರ್ ಅಲಿ, ಶೌಕತ್ ಶೌರಿ ಮತ್ತಿತರರು ಉಪಸ್ಥಿತರಿದ್ದರು.