ಕಸ್ತೂರಿ ರಂಗನ್ ವರದಿ ವಿರೋಸಿ ಕೇಂದ್ರಕ್ಕೆ ನಿಯೋಗ ಅತ್ಯವಶ್ಯಕ: ಹಮೀದ್ ಇಡ್ನೂರು

Update: 2017-04-21 18:42 GMT

ಸುಬ್ರಹ್ಮಣ್ಯ, ಎ.21: ಕಸ್ತೂರಿ ರಂಗನ್ ವರದಿ ಜಾರಿಯ ಕುರಿತಂತೆ ಅರಣ್ಯ, ಜೀವಿಶಾಸ ಮತ್ತು ಪರಿಸರ ಇಲಾಖೆಯು ಬಾತ ಗ್ರಾಪಂಗಳ ಅಭಿ ಪ್ರಾಯ ಸಂಗ್ರಹಿಸಿ ವರದಿ ಸಲ್ಲಿಸುವಂತೆ ಕೇಳಿದೆ.

ಅದರಂತೆ ಬಾತ ಗ್ರಾಮಗಳ ಎಲ್ಲಾ ಪಂಚಾಯತ್‌ಗಳು ಯೋಜನೆಗೆ ಸಂಪೂರ್ಣ ವಿರೋಧ ವ್ಯಕ್ತಪಡಿಸಿ ನಿರ್ಣಯ ಕೈಗೊಂಡು ವರದಿ ಕಳುಹಿಸಿದೆ. ಆದರೆ ಇದು ಯಾವುದೂ ಪರಿಣಾಮ ಬೀರಿಲ್ಲ. ಈ ಹಿನ್ನೆಲೆ ಯಲ್ಲಿ ರಾಜ್ಯ ಸರಕಾರವು ಈ ಯೋಜನೆಯನ್ನು ಪ್ರಬಲವಾಗಿ ವಿರೋಸಬೇಕು. ಈ ಕುರಿತಂತೆ ಕೇಂದ್ರಕ್ಕೆ ನಿಯೋಗ ಕೊಂಡೊಯ್ಯಬೇಕು ಎಂದು ರೈತ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಹಮೀದ್ ಇಡ್ನೂರು ಆಗ್ರಹಿಸಿದ್ದಾರೆ.

ಸುಬ್ರಹ್ಮಣ್ಯದಲ್ಲಿ ಶುಕ್ರವಾರ ಕರೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲಾ 28 ಸಂಸದರು ಈ ಯೋಜನೆಯನ್ನು ಕರ್ನಾಟಕದಲ್ಲಿ ಅನುಷ್ಠಾನ ಮಾಡಲು ತೀವ್ರವಾಗಿ ವಿರೋಸಬೇಕು. ಅದರಲ್ಲೂ ಬಾತ ಜಿಲ್ಲೆಗಳ ಲೋಕಸಭಾ ಸದಸ್ಯರು ಈ ವಿಚಾರವನ್ನು ಗಂಭೀರ ವಾಗಿ ಪರಿಣಗಣಿಸಿ ಕೇಂದ್ರಕ್ಕೆ ತೀವ್ರ ಒತ್ತಡ ಹಾಕ ಬೇಕು. ಹಾಗಾದಾಗ ಮಾತ್ರ ಈ ಯೋಜನೆ ಬುಡ ಸಮೇತ ಕಿತ್ತೊಗೆಯಲು ಸಾಧ್ಯವಿದೆ. ಇಲ್ಲವಾದಲ್ಲಿ ರೈತರಿಗೆ ತೀವ್ರ ಸಂಕಷ್ಟ ಎದುರಾಗಲಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

2016ರ ಆ.11ರಂದು ಕೇಂದ್ರ ಸಚಿವ ಪ್ರಕಾಶ್ ಜಾವೆಡ್ಕರ್ ಈ ಯೋಜನೆಯ ಸಾಧಕ ಬಾಧಕಗಳ ಕುರಿತು ಸಂಸದ ಸಭೆಯನ್ನು ಹೊಸದಿಲ್ಲಿಯಲ್ಲಿ ಕರೆದಿದ್ದರು. ಸಭೆಯಲ್ಲಿ 16 ಸದಸ್ಯರು ಮಾತ್ರ ಭಾಗ ವಹಿಸಿದ್ದು, ಇದರಲ್ಲಿ 9 ಸಂಸದರು ಕೇರಳವದರಾಗಿದ್ದರು. ಕರ್ನಾಟಕದಿಂದ ನಳಿನ್ ಕುಮಾರ್ ಕಟೀಲು, ಆಸ್ಕರ್ ೆರ್ನಾಂಡಿಸ್, ಅನಂತ ಕುಮಾರ್ ಹೆಗಡೆ ಮಾತ್ರ ಭಾಗವಹಿಸಿದ್ದರು. ರಾಜ್ಯದ ಎಲ್ಲಾ ಸಂಸದರು ಭಾಗವಹಿಸಿ ಜನತೆಗೆ ಆಗುವ ಸಂಕಷ್ಟವನ್ನು ಕೇಂದ್ರದ ಮುಂದಿರಿಸಿ ವರದಿ ತಿರಸ್ಕರಿಸುವಂತೆ ಒತ್ತಡ ಹೇರಿ ದ್ದರೆ ಪ್ರಯೋಜನವಾಗುತ್ತಿತ್ತು ಎಂದು ಅವರು ಹೇಳಿದರು. ವರದಿಯ ಕರಡು ಮಸೂದೆ ಈಗಾಗಲೆ ಸಿದ್ಧ ವಾಗಿದೆ. ಇನ್ನೂ 504 ದಿನಗಳ ಒಳಗೆ ಜನರು ಮತ್ತು ಜನಪ್ರತಿನಿಗಳು ಈ ಯೋಜನೆ ಬೇಡ ಎಂಬ ನಿರ್ಣಯವನ್ನು ಕಳುಹಿಸಬೇಕು. ಹಾಗಾದರೆ ಮಾತ್ರ ಯೋಜನೆಯನ್ನು ತಡೆಹಿಡಿಯಲು ಸಾಧ್ಯ ಎಂದು ವೇದಿಕೆಯ ಸದಸ್ಯ ಮತ್ತು ಮಾಜಿ ಜಿಪಂ ಸದಸ್ಯ ಭರತ್ ಮುಂಡೋಡಿ ಹೇಳಿದರು.

48 ಗ್ರಾಮಗಳ ಜನತೆ ಬೀದಿಪಾಲು:  ಈ ಯೋಜ ನೆಯು ದ.ಕ. ಜಿಲ್ಲೆಯ ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕಿಗೆ ಅನ್ವಯವಾಗುತ್ತದೆ. ಜಿಲ್ಲೆಯ 48 ಗ್ರಾಮಗಳ ಜನರು ಪೂರ್ತಿಯಾಗಿ ಬೀದಿ ಪಾಲಾಗುತ್ತಾರೆ. ಅಲ್ಲದೆ ಈ ಗ್ರಾಮಗಳಲ್ಲಿ ರಸ್ತೆ, ವಿದ್ಯುತ್, ವಾಣಿಜ್ಯ ಬೆಳೆ ಬೆಳೆಯಲು, ಸ್ಥಳ ಮಾರಾಟ ಅಥವಾ ಖರೀದಿ ಮಾಡಲು, ನಿತ್ಯ ಜೀವನದ ಬಳಕೆಗೆ ಬೇಕಾಗಿರುವಂತಹ ವಸ್ತುಗಳನ್ನು ಪ್ರಕೃತಿ ಯಿಂದ ಪಡೆಯಲು ಅರಣ್ಯ ಇಲಾಖೆಯು ಅಡ್ಡಿ ಪಡಿಸುತ್ತದೆ. ಅಲ್ಲದೆ ಈ ಯೋಜನೆ ಜಾರಿ ಯಾದರೆ ವಾಯು ಮಾಲಿನ್ಯ ತಡೆ ವ್ಯವಸ್ಥೆ ಬರುತ್ತದೆ. ಇದರಿಂದಾಗಿ ವಾಹನಗಳ ಓಡಾಟಕ್ಕೆ ನಿರ್ಬಂಧ ಬರುತ್ತದೆ ಎಂದು ಭರತ್ ಮುಂಡೋಡಿ ಹೇಳಿದರು.

ಆದ್ದರಿಂದ ಈ ಯೋಜನೆಯನ್ನು ಸಂಪೂರ್ಣವಾಗಿ ವಿರೋಸುತ್ತೇವೆ. ಅಲ್ಲದೆ ಯೋಜನೆ ನಿಲ್ಲುವ ತನಕ ತೀವ್ರ ಹೋರಾಟ ಮುಂದುವರೆಸುತ್ತೇವೆ ಎಂದು ಮುಂಡೋಡಿ ನುಡಿದರು.

  ಸುದ್ದಿಗೋಷ್ಠಿಯಲ್ಲಿ ರೈತ ಹಿತ ರಕ್ಷಣಾ ವೇದಿಕೆಯ ಸತೀಶ್ ಕೂಜುಗೋಡು, ದುರ್ಗಾದಾಸ್ ಮಲ್ಲಾರ, ವಸಂತ ಕಿರಿಭಾಗ, ಸೋಮಶೇಖರ ಕಟ್ಟೆಮನೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News