×
Ad

ಮಹಾಭಾರತದ ಟೀಕೆ: ಕಮಲ್‌ಹಾಸನ್ ಮುಖತಃ ಹಾಜರಾಗಲು ನ್ಯಾಯಾಲಯ ಆದೇಶ !

Update: 2017-04-22 12:44 IST

ಚೆನ್ನೈ, ಎ. 22: ಮಹಾಭಾರತ ಕಾವ್ಯವನ್ನು ವಿಮರ್ಶಿಸಿದ ಪ್ರಕರಣದಲ್ಲಿ ಚಲನಚಿತ್ರ ನಟ ಕಮಲ್ ಹಾಸನ್ ನೇರವಾಗಿ ಹಾಜರಾಗಬೇಕೆಂದು ನ್ಯಾಯಾಲಯ ಆದೇಶಿಸಿದೆ. ಹಿಂದೂಮುನ್ನಣಿಯ ಕಾರ್ಯಕರ್ತ ಆದಿತ್ಯನಾಥ ಸುಂದರಂ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ತಿರುನೆಲ್ವೇಲಿ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ. ಮೇ.5ಕ್ಕೆ ಕಮಲ್ ನ್ಯಾಯಾಲಯಕ್ಕೆ ಹಾಜರಾಗಬೇಕಾಗಿದೆ.

ಮಹಿಳೆಯರನ್ನು ಪಣ ಇಟ್ಟು ಜೂಜಾಡಬಹುದು ಎನ್ನುವ ಸಂದೇಶ ನೀಡುವ ಗ್ರಂಥಕ್ಕೆ ಭಾರತೀಯರು ಹೆಚ್ಚು ಗೌರವ ಕೊಡುತ್ತಿದ್ದಾರೆ ಎಂದು ಕಮಲ್ ಹಾಸನ್ ಮಾರ್ಚ12ರಂದು ಖಾಸಗಿ ಚ್ಯಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಹಾಭಾರತ ಗ್ರಂಥವನ್ನು ವಿಮರ್ಶಿಸಿದ್ದರು. ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಹಿಂದೂ ಮುನ್ನಣಿ ಕಾರ್ಯಕರ್ತ ಆದಿತ್ಯನಾಥ ಸುಂದರಂ ಚೆನ್ನೈ ಪೊಲೀಸರಿಗೆ ಮತ್ತು ತಿರುನೆಲ್‌ವೇಲಿ ನ್ಯಾಯಾಲಯಕ್ಕೆ ದೂರು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News