ಬ್ಯಾರಿ ಗೈಸ್‌ನಿಂದ ಬ್ಯಾರಿ ಸಂಭ್ರಮ ಕಾರ್ಯಕ್ರಮ
ಮಂಗಳೂರು, ಎ.22: ಬ್ಯಾರಿ ಗೈಸ್ ಕೆ.ಎಸ್.ಎ. ಇದರ ವತಿಯಿಂದ ‘ಬ್ಯಾರಿ ಸಂಭ್ರಮ’ ಕಾರ್ಯಕ್ರಮ ಶನಿವಾರ ನಗರದ ಪುರಭವನದಲ್ಲಿ ಜರಗಿತು.
ದ.ಕ.ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಿದರು. ಅಸೈಯ್ಯದ್ ಮುಕ್ತಾರ್ ತಂಙಳ್ ಕುಂಬೋಳ್ ದುಆಗೈದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ಯು.ಟಿ.ಖಾದರ್, ಯುವಕರು ಸಂಘಟಿತರಾಗಿ ಇಂತಹ ಜನಪರ ಕಾರ್ಯಕ್ರಮ ಹಮ್ಮಿಕೊಳ್ಳುವುದು ಶ್ಲಾಘನೀಯ. ‘ಬ್ಯಾರಿ ಗೈಸ್’ನ ಕಾರ್ಯಚಟುವಟಿಕೆಗಳು ಇದರ ಸಮಾಜದ ಯುವಕರ ಕಣ್ತೆರೆಸುವಂತಾಗಲಿ ಎಂದರು.
ಅಬ್ದುಲ್ ಅಝೀಝ್ ದಾರಿಮಿ ದಿಕ್ಸೂಚಿ ಭಾಷಣ ಮಾಡಿದರು. ಶಾಸಕರಾದ ಜೆ.ಆರ್.ಲೋಬೊ, ಬಿ.ಎ.ಮೊಯ್ದಿನ್ ಬಾವಾ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್, ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಕೂಡ್ಲಿಪೇಟೆ, ಪಿಎಫ್‌ಐ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ, ಮಾಜಿ ಮೇಯರ್ ಕೆ.ಅಶ್ರಫ್, ಉದ್ಯಮಿ ಶಂಸುದ್ದೀನ್, ಜಿಪಂ ಸದಸ್ಯ ಕೆ.ಕೆ. ಶಾಹುಲ್ ಹಮೀದ್, ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಮತ್ತಿತರರು ಭಾಗವಹಿಸಿದ್ದರು.
ಬ್ಯಾರಿ ಗೈಸ್‌ನ ಅಡ್ಮಿನ್‌ಗಳಾದ ಇಮ್ತಿಯಾಝ್ ಬಜ್ಪೆ, ಇಮ್ತಿಯಾಝ್ ಮುಂಚೂರು, ನಝೀರ್ ಉಳಾಯಿಬೆಟ್ಟು, ನಝೀರ್ ಹಂಡೇಲು, ಝಿಯಾದ್ ವಿಟ್ಲ ಉಪಸ್ಥಿತರಿದ್ದರು.
*ಕಾರ್ಯಕ್ರಮದಲ್ಲಿ ಅರ್ಹ 4 ಕುಟುಂಬಗಳಿಗೆ ನಿರ್ಮಿಸಿದ ಮನೆಗಳ ಕೀ ಹಸ್ತಾಂತರಿಸಲಾಯಿತು. ಕುರ್‌ಆನ್ ಕಂಠಪಾಠ ಮಾಡಿದ 20 ಹಾಫಿಳ್‌ಗಳನ್ನು ಗೌರವಿಸಲಾಯಿತು. 20 ಅರ್ಹ ಕುಟುಂಬಗಳ ಮನೆ ನಿರ್ಮಾಣಕ್ಕೆ ಅರ್ಜಿ ಸ್ವೀಕರಿಸಲಾಯಿತು. ರಕ್ತದಾನ ಮತ್ತು ಉಚಿತ ವೈದ್ಯಕೀಯ ಶಿಬಿರ ನಡೆಸಲಾಯಿತು.