×
Ad

ಫಿಸಿಯೋಥರಪಿಸ್ಟ್ ಕ್ಷೇತ್ರದಲ್ಲಿ ಶೀಘ್ರವೇ ಭಾರತ ನಂ. 1: ಸಚಿವ ಅನಂತ ಕುಮಾರ್

Update: 2017-04-22 18:20 IST

ಮಂಗಳೂರು, ಎ.22: ನಗರದ ಮೇರಿಹಿಲ್‌ನಲ್ಲಿರುವ ವಿಕಾಸ ಫಿಸಿಯೋಥೆರಪಿ ಕಾಲೇಜಿನ ನವೀಕೃತ ಪ್ರಯೋಗಶಾಲೆಯ ಉದ್ಘಾಟನೆಯನ್ನು ಕೇಂದ್ರದ ಸಚಿವದ್ವರಯರಾದ ರಮೇಶ್ ಜಿಗಜಿಣಗಿ ಹಾಗೂ ಅನಂತ ಕುಮಾರ್ ನೆರವೇರಿಸಿದರು.

ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ಮಾತನಾಡಿ, ಭಾರತದಲ್ಲಿ ಫಿಸಿಯೋಥೆರಪಿಸ್ಟ್‌ಗಳ ಅಗತ್ಯತೆತೆ ಅಧಿಕವಾಗಿದೆ. ಹೊರಾಂಗಣ ಕ್ರೀಡೆ, ಸಾಹಸ ಕ್ರೀಡೆಗಳು, ಆರೋಗ್ಯ ಮೊದಲಾದವುಗಳಿಗಾಗಿ ಇನ್ನೂ ಹೆಚ್ಚಿನ ಸಂಖ್ಯೆಯ ಅಗತ್ಯವಿದೆ. ಆದ್ದರಿಂದ ಭಾರತವು ತಂತ್ರಾಂಶದಲ್ಲಿ ವಿಶ್ವದಲ್ಲಿ ಮುಂಚೂಣಿಯಲ್ಲಿರು ಪ್ರಯತ್ನಿಸುತ್ತಿರುವಂತೆಯೇ ಔಷಧ ವಿಜ್ಞಾನದಲ್ಲೂ ಶೀಘ್ರವೇ ್ರಥಮ ಸ್ಥಾನಕ್ಕೇರಲಿದೆ ಎಂದರು.

 ವಿಶ್ವ ದರ್ಜೆಯ ಫಿಸಿಯೋಥೆರಪಿಸ್ಟ್‌ಗಳು ಭಾರತದಲ್ಲಿದ್ದಾರೆ. ಆದರೂ, ದೇಶ, ರಾಜ್ಯಕ್ಕೆ ಬೇಕಾಗುವಷ್ಟು ಫಿಸಿಯೋಥೆರಪಿಸ್ಟ್‌ಗಳು ನಮ್ಮಲ್ಲಿಲ್ಲ. ವಿಶ್ವದರ್ಜೆಯ ಫಿಸಿಯೋಥೆರಪಿಸ್ಟ್‌ಗಳು ಇರುವುದರಿಂದ ಅಮೆರಿಕ ಮುಂತಾದ ರಾಷ್ಟ್ರಗಳಿಂದ ನಮ್ಮ ದೇಶದವರಿಗೆ ಬೇಡಿಕೆ ಇದೆ. ಮುಂದೊಂದು ದಿನ ಭಾರತ ಈ ಕ್ಷೇತ್ರದಲ್ಲಿ ವರ್ಲ್ಡ್ ಕ್ಯಾಪ್ಟನ್ ಆಗಲಿದೆ ಎಂದು ಅವರು ಹೇಳಿದರು.

ಕೇಂದ್ರ ಕುಡಿಯುವ ನೀರು ಮತ್ತು ನೌರ್ಮಲ್ಯ ಖಾತೆ ರಾಜ್ಯ ಸಚಿವ ರಮೇಶ್ ಜಿಣಜಿಣಗಿ ಮಾತನಾಡಿ, ಪ್ರಸ್ತುತ ಫಿಸಿಯೋಥೆರಪಿ ಚಿಕಿತ್ಸೆ ಕೇವಲ ಶ್ರೀಮಂತರ ಪಾಲಿಗೆ ಮಾತ್ರ ಸೀಮಿತವಾಗಿಲ್ಲ. ಅದು ಎಲ್ಲಾ ವರ್ದವರಿಗೂ ಅಗತ್ಯವಾಗಿದೆ ಎಂದರು.

ಸಂಸ್ಥೆಯ ಅಧ್ಯಕ್ಷ ಕೃಷ್ಣ ಜೆ. ಪಾಲೆಮಾರ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ನಳಿನ್‌ಕುಮಾರ್ ಕಟೀಲು, ವಿಧಾನ ಪರಿಷತ್ ಮುಖ್ಯ ಸಚೇತಕ ಕ್ಯಾ. ಗಣೇಶ್ ಕಾರ್ಣಿಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ಸಂಸ್ಥೆಯ ಟ್ರಸ್ಟಿಗಳಾದ ಜೆ. ಕೊರಗಪ್ಪ, ಸೂರಜ್ ಕುಮಾರ್ ಕಲ್ಯ, ಸಲಹೆಗಾರ ಡಾ. ಅನಂತ್ ಪ್ರಭು, ಸಹಾಯಾಧಿಕಾರಿ ಪಾರ್ಥಸಾರಥಿ ಜೆ. ಪಾಲೆಮಾರ್, ಪ್ರಾಂಶುಪಾಲರಾದ ರಮೇಶ್ ಕೆ. ಉಪಸ್ಥಿತರಿದ್ದರು.

ಐಶ್ವರ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News