ಜಲೀಲ್ ಕರೋಪಾಡಿಯ ಹತ್ಯೆಗೆ ಡಿಕೆಎಸ್‌ಸಿ ಖಂಡನೆ
Update: 2017-04-22 18:38 IST
ಮಂಗಳೂರು, ಎ.22: ಕರೋಪಾಡಿ ಗ್ರಾಪಂ ಉಪಾಧ್ಯಕ್ಷ ಹಾಗು ಡಿಕೆಎಸ್‌ಸಿ ತಾಯಿಫ್ ಘಟಕದ ಮಾಜಿ ಪ್ರಧಾನ ಕಾರ್ಯದರ್ಶಿ, ಡಿಕೆಎಸ್‌ಸಿ ಡೆವಲಪ್‌ಮೆಂಟ್ ಕಮಿಟಿಯ ಸಂಚಾಲಕ, ಸುನ್ನಿ ಗೈಡೆನ್ಸ್ ಬ್ಯೂರೋ ಮತ್ತು ಮರ್ಕಝ್ ಸಮಿತಿಯ ಸದಸ್ಯ ಜಲೀಲ್ ಕರೋಪಾಡಿಯ ಹತ್ಯೆಯನ್ನು ಡಿಕೆಎಸ್‌ಸಿ ಡೆವಲಪ್‌ಮೆಂಟ್ ಕಮಿಟಿ ಖಂಡಿಸಿದೆ.
ಡಿಕೆಎಸ್‌ಸಿ ಅಧ್ಯಕ್ಷ ಸೈಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್, ಡಿಕೆಎಸ್‌ಸಿ ಡೆವಲೆಪ್‌ಮೆಂಟ್ ಕಮಿಟಿಯ ಅಧ್ಯಕ್ಷ ಇಸಾಕ್ ಬೊಳ್ಳಾಯಿ, ಪ್ರಧಾನ ಕಾರ್ಯದರ್ಶಿ ಶರೀಫ್ ಬಜ್ಪೆ, ಮರ್ಕಝ್ ಸಮಿತಿಯ ಉಪಾಧ್ಯಕ್ಷರಾದ ಬದ್ರುದ್ದೀನ್ ಬಜ್ಪೆ, ಎಂ.ಎಚ್.ಬಿ. ಮುಹಮ್ಮದ್, ಪ್ರವರ್ತಕರಾದ ಮುಹಮ್ಮದ್ ಮೇದರಬೆಟ್ಟು, ಅಶ್ರಫ್ ಮೈನಾ, ಫಾರೂಕ್ ಸುರತ್ಕಲ್, ಸುನ್ನಿ ಗೈಡೆನ್ಸ್ ಬ್ಯೂರೋ ಅಧ್ಯಕ್ಷ ಮುಹಮ್ಮದ್ ಅಲ್ ಖಾಸಿಮಿ ಅಳಕೆಮಜಲು, ಸೈಯದ್ ಮುಕ್ತಾರ್ ತಂಙಳ್ ಕುಂಬೋಳ್, ಮರ್ಕಝ್ ಮ್ಯಾನೇಜರ್ ಮುಸ್ತಫಾ ಸಅದಿ ಸಂತಾಪ ಸೂಚಿಸಿದ್ದಾರೆ.