ಎಸ್‌ಡಿಪಿಐಯಿಂದ ಉಚಿತ ನೀರು ಪೊರೈಕೆ
Update: 2017-04-22 18:40 IST
ಉಡುಪಿ, ಎ.22: ನೀರಿನ ತೊಂದರೆ ಅನುಭವಿಸುತ್ತಿರುವ ಉಡುಪಿಯ ಕೊಂಡಕೂರು, ದೊಡ್ಡಣಗುಡ್ಡೆ, ನಾಯರ್‌ಕೆರೆ, ಆದಿಉಡುಪಿ ಪ್ರದೇಶಗಳಿಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ವಿಧಾನ ಸಭಾ ಕ್ಷೇತ್ರದ ವತಿಯಿಂದ ಉಚಿತ ಕುಡಿಯುವ ನೀರನ್ನು ಇಂದು ವಿತರಿಸ ಲಾಯಿತು.
ಈ ಯೋಜನೆಗೆ ಎಸ್‌ಡಿಪಿಐ ಉಡುಪಿ ಕ್ಷೇತ್ರ ಅಧ್ಯಕ್ಷ ನಝೀರ್ ಉಡುಪಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ಸಮಿತಿ ಸದಸ್ಯ ಬಶೀರ್ ಅಂಬಾ ಗಿಲು, ಸಲೀಂ ಕೊಡಂಕೂರು, ಅಝರ್ ದೊಡ್ಡಣಗುಡ್ಡೆ, ಖಾಲಿದ್ ಎರ್ಮಾಳ್ ಮೊದಲಾದವರು ಉಪಸ್ಥಿತರಿದ್ದರು.